ಪರಮೇಶ್ವರ್ ಎಷ್ಟು ಆಸ್ತಿ ಮಾಡಿದ್ದಾರೆ..? ಅವರ ಜೀವನದ ಕಥೆಯೇನು..?

ಹಾಯ್ ಫ್ರೆಂಡ್ಸ್, ಡಾ.ಜಿ. ಪರಮೇಶ್ವರ್.. ಹಲವು ಬಾರಿ ಸಚಿವರಾಗಿ.. ಕೆಪಿಸಿಸಿ ಅಧ್ಯಕ್ಷರಾಗಿ.. ಬಳಿಕ ಕುಮಾರಸ್ವಾಮಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ದಲಿತ ನಾಯಕ. ಇಂತಹ ಪರಮೇಶ್ವರ್ ನಡೆದು ಬಂದ ಹಾದಿ ಹೇಗಿದೆ..? ಡಾಕ್ಟರ್ ಜಿ ಪರಮೇಶ್ವರ್ ಎಷ್ಟು ಆಸ್ತಿ ಮಾಡಿದ್ದಾರೆ ಗೊತ್ತಾ..? ಈ ಎಲ್ಲ ಮಾಹಿತಿಯನ್ನ ಹೇಳ್ತಾ ಹೋಗ್ತೀವಿ.

100 ಮೀಟರ್‍ನ್ನ 10 ಸೆಕೆಂಡ್‍ಗಳಲ್ಲಿ ಓಡಿದ್ದ ಪರಂ
ಫ್ರೆಂಡ್ಸ್ ಡಾಕ್ಟರ್ ಜಿ ಪರಮೇಶ್ವರ್ ಆಗಸ್ಟ್ 6, 1951 ರಲ್ಲಿ ತುಮಕೂರಿನ ಗೊಲ್ಲಹಳ್ಳಿ ಅಥವಾ ಸಿದ್ಧಾರ್ಥ ನಗರದಲ್ಲಿ ಜನಿಸಿದರು. ಇವರ ತಂದೆ ಮಾಜಿ ಎಂಎಲ್ಸಿ ಗಂಗಾಧರಯ್ಯ ಹೆಬ್ಬಳಾಲು ಮರಿಯಪ್ಪ. ಪಿಯುಸಿವರೆಗೆ ಹುಟ್ಟೂರಿನಲ್ಲೇ ಶಿಕ್ಷಣ ಮುಗಿಸಿದ ಪರಮೇಶ್ವರ್, ಬೆಂಗಳೂರಿನ ಕೃಷಿ ವಿ????ನ ವಿವಿಯಲ್ಲಿ ಕೃಷಿ ವಿಷಯದಲ್ಲಿ ಬಿಎಸ್ಸಿ ಹಾಗೂ ಎಂಎಸ್ಸಿ ಶಿಕ್ಷಣ ಮುಗಿಸಿದರು. ಬಳಿಕ ಆಸ್ಟ್ರೇಲಿಯಾದ ಅಡಿಲೇಡ್ ಯೂನಿವರ್ಸಿಟಿಯಿಂದ ಪಿಎಚ್ ಡಿ ಪದವಿ ಪಡೆದರು. ಇನ್ನೊಂದು ವಿಚಾರ ಅಂದ್ರೆ ಚಿಕ್ಕಂದಿನಲ್ಲೇ ಎನ್ ಸಿಸಿ ಸೇರಿದ ಪರಮೇಶ್ವರ್, ಒಳ್ಳೆಯ ಅಥ್ಲೀಟ್ ಕೂಡ ಆಗಿದ್ರು. 100 ಮೀಟರ್ ಓಟವನ್ನ ಪರಮೇಶ್ವರ್ ಕೇವಲ 10 ಪಾಯಿಂಟ್ 9 ಸೆಕೆಂಡ್ಗಳಲ್ಲಿ ಓಡಿದ ದಾಖಲೆ.. ಬೆಂಗಳೂರಿನ ಕೃಷಿ ವಿ????ನ ವಿವಿಯಲ್ಲಿದೆ.

ರಾಜೀವ್ ಗಾಂಧಿ ಪ್ರೇರಣೆಯಿಂದ ರಾಜಕೀಯಕ್ಕೆ
ಫ್ರೆಂಡ್ಸ್ ಆಸ್ಟ್ರೇಲಿಯಾದಲ್ಲಿ ಪಿಎಚ್ಡಿ ಮುಗಿಸಿ ಬಂದ ಪರಮೇಶ್ವರ್, ತುಮಕೂರಿನ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆಡಳಿತಾಧಿಕಾರಿಯಾದ್ರು. ಬಳಿಕ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಹಾಸ್ಪಿಟಲ್ ಹಾಗೂ ಸಂಶೋಧನಾ ಕೇಂದ್ರವನ್ನ ಸ್ಥಾಪಿಸಲು ತಂದೆಗೆ ಸಹಾಯ ಮಾಡಿದ್ರು. ನಂತ್ರ 1989 ರಲ್ಲಿ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಉದ್ಘಾಟನೆಗಾಗಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯನ್ನ ಆಹ್ವಾನಿಸಲು ನಿರ್ಧರಿಸಿದರು. ಈ ನಿಟ್ಟಿನಲ್ಲಿ ಅಂದಿನ ಶಿಕ್ಷಣ ಸಚಿವ ಎ???ಂ ಯಹ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ದೆಹಲಿಗೆ ಹೋದರು. ಆಗ ಇವರನ್ನ ನೋಡಿದ ರಾಜೀವ್ ಗಾಂಧಿ ರಾಜಕೀಯಕ್ಕೆ ಸೇರುವಂತೆ ಪರಮೇಶ್ವರ್ ಗೆ ಸಲಹೆ ನೀಡಿದರು. ಅದರಂತೆ ರಾಜಕೀಯಕ್ಕೆ ದುಮುಕಿದ ಪರಮೇಶ್ವರ್ ಕೆಪಿಸಿಸಿ ಜಂಟಿ ಕಾರ್ಯದರ್ಶಿಯಾದರು.

1989 ರಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಗೆಲುವು
ಫ್ರೆಂಡ್ಸ್ ಡಾಕ್ಟರ್ ಜಿ ಪರಮೇಶ್ವರ್ 1989 ರಲ್ಲಿ ಅಂದಿನ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಂತರು. ಮೊದಲ ಪ್ರಯತ್ನದಲ್ಲೇ ಜನತಾದಳದ ರಾಜವರ್ಧನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ವಿಧಾನಸಭೆ ಪ್ರವೇಶಿಸಿದ್ರು. ನಂತ್ರ ವೀರಪ್ಪಮೊಯ್ಲಿ ಸರ್ಕಾರದಲ್ಲಿ ಸಚಿವರಾದ್ರು. ಆದರೆ 1994 ರ ಚುನಾವಣೆಯಲ್ಲಿ ಪರಮೇಶ್ವರ್ ಸೋಲು ಅನುಭವಿಸಿದ್ದರು. ಇದರಿಂದ ಧೃತಿಗೆಡದ ಪರಂ, 1999 ರಲ್ಲಿ ಮತ್ತೆ ಚುನಾವಣೆಗೆ ನಿಂತು 55 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ರು. ಆ ಚುನಾವಣೆಯಲ್ಲಿನ ಅತಿದೊಡ್ಡ ಗೆಲುವಿನ ಅಂತರ ಇದಾಗಿತ್ತು. ಬಳಿಕ ಎ???ಂ ಕೃಷ್ಣ ಸರ್ಕಾರದಲ್ಲೂ ಪರಮೇಶ್ವರ್ ಗೆ ಸಚಿವಗಿರಿ ಸಿಗ್ತು. ನಂತ್ರ 2004ರಲ್ಲಿ ಮಧುಗಿರಿಯಿಂದಲೂ,.. 2008ರಲ್ಲಿ ಕೊರಟಗೆರೆ ಕ್ಷೇತ್ರದಿಂದಲೂ ಜಯಭೇರಿ ಬಾರಿಸಿದ್ದರು.

2010 ರಲ್ಲಿ ಒಲಿಯಿತು ಕೆಪಿಸಿಸಿ ಅಧ್ಯಕ್ಷ ಪಟ್ಟ
ಹೌದು ಫ್ರೆಂಡ್ಸ್ 2010ರಲ್ಲಿ ಡಾಕ್ಟರ್ ಜಿ ಪರಮೇಶ್ವರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ಆದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್ ಸೋತು ಸುಣ್ಣವಾದರು. ಬಳಿಕ ಅವರನ್ನು ವಿಧಾನಪರಿಷತ್ ಗೆ ಕಳಿಸಲಾಯಿತು. ಅಲ್ಲದೇ ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಕೆಜೆ ಜಾರ್ಜ್ ಅವರನ್ನು ಕೆಳಗಿಳಿಸಿ ಪರಮೇಶ್ವರ್ ಅವರನ್ನು ಹೋಮ್ ಮಿನಿಸ್ಟರ್ ಮಾಡಲಾಯಿತು. ಆದ್ರೆ 2017ರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪರಂ, ಕೇವಲ ಕೆಪಿಸಿಸಿ ಅಧ್ಯಕ್ಷರಾಗಿ ಉಳಿದರು. 2018ರಲ್ಲಿ ಮತ್ತೆ ಗೆದ್ದು ಬಂದ ಪರಮೇಶ್ವರ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಆಗಿ… ದಲಿತ ಮುಖಂಡನೊಬ್ಬ ಮೊದಲ ಬಾರಿ ಉಪಮುಖ್ಯಮಂತ್ರಿಯಾದ ದಾಖಲೆ ಬರೆದರು.

18.4 ಕೋಟಿ ಆಸ್ತಿಯ ಒಡೆಯ ಪರಮೇಶ್ವರ್
ಹೌದು ಫ್ರೆಂಡ್ಸ್ ಡಾಕ್ಟರ್ ಜಿ ಪರಮೇಶ್ವರ್ ಬರೋಬ್ಬರಿ 18.4 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಾಗ ಅವರು ಸಲ್ಲಿಸಿದ ಅಫಿಡವಿಟ್ನಲ್ಲಿ ಇದನ್ನು ಘೋಷಿಸಿಕೊಂಡಿದ್ದಾರೆ. ಅದರ ಪ್ರಕಾರ ಪರಮೇಶ್ವರ್ 3,47,43,770 ರೂಪಾಯಿ ಚರಾಸ್ತಿ ಹಾಗೂ 5,88,48,176 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಕೆ.ಪರಮೇಶ್ವರಿ ಬಳಿ 3,32,94,305 ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 5,73,98,702 ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅಂದಹಾಗೆ ಇದು ಅವರು ಘೋಷಿಸಿಕೊಂಡಿರುವ ಆಸ್ತಿ ಅಷ್ಟೇ. ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಶಾಕಿಂಗ್ ಅಂಶವಿದೆ. ಅದೇನು ಅಂದರೆ., ಪರಮೇಶ್ವರ್ ಅವರು ನಡೆಸುತ್ತಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳು ಕೇವಲ ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ ಮಲೇಷಿಯಾದಲ್ಲೂ ಇವೆ. ಇದೊಂದು ದೊಡ್ಡ ಶಿಕ್ಷಣ ಸಾಮ್ರಾಜ್ಯ. ಡಾ.ಜಿ. ಪರಮೇಶ್ವರ್ ಅವರ ಈ ಸಿದ್ದಾರ್ಥ ಶಿಕ್ಷಣ ಸಾಮ್ರಾಜ್ಯದ ಒಟ್ಟು ಮೌಲ್ಯ 5,000 ಕೋಟಿಗೂ ಅಧಿಕ ಅಂತಾ ಹೇಳಲಾಗುತ್ತದೆ. ಈಗ ಐಟಿ ಅಧಿಕಾರಿಗಳು ಇದೇ ಶಿಕ್ಷಣ ಸಂಸ್ಥೆಗಳ ಜನ್ಮ ಜಾಲಾಡುತ್ತಿದ್ದಾರೆ. ಸೀಟು ಬ್ಲಾಕ್ ಮಾಡಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕೋಟಿಗಟ್ಟಲೆ ದುಡ್ಡಿಗೆ ಸೀಟು ಮಾರಾಟ ಮಾಡಿರುವ ಆರೋಪ ಮಾಡಲಾಗುತ್ತಿದೆ. ಜೊತೆಗೆ ಆದಾಯ ತೆರಿಗೆಯಲ್ಲಿ ವಂಚಿಸಿರುವ ಆರೋಪವನ್ನು ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಹಾಗೆಯೇ ದಾಖಲೆಗಳನ್ನು ಸಂಗ್ರಹಿಸುವ ಉದ್ದೇಶದಿಂದ ಈ ಐಟಿ ರೇಡ್ ನಡೆದಿದೆ ಎನ್ನಲಾಗಿದೆ.

Contact Us for Advertisement

Leave a Reply