ಡಿಕೆಶಿಯನ್ನು ಅಪ್ಪಿ ಭಾವುಕರಾದ ಪರಮೇಶ್ವರ್​​..!

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಮಾಜಿ ಡಿಸಿಎಂ ಪರಮೇಶ್ವರ್ ಭೇಟಿ ನೀಡಿದ್ದಾರೆ. ನಿನ್ನೆ ಡಿಕೆಶಿ ಸ್ವಾಗತಕ್ಕೆ ಗೈರಾಗಿದ್ದ ಪರಮೇಶ್ವರ್ ಇವತ್ತು ಡಿಕೆಶಿಯ ಸದಾಶಿವನಗರ ನಿವಾಸಕ್ಕೆ ಹೋಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಅಪ್ಪಿಕೊಂಡು ಪರಮೇಶ್ವರ್ ಭಾವುಕರಾಗಿದ್ದಾರೆ ಎನ್ನಲಾಗಿದೆ. ಇನ್ನೊಂದು ವಿಶೇಷ ಅಂದ್ರೆ ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಡಿ.ಕೆ.ಶಿವಕುಮಾರ್ ಭೇಟಿಗೆ ಅವರ ಮನೆಗೆ ತೆರಳಿದ್ದಾರೆ. ಮೂವರೂ ನಾಯಕರು ಒಟ್ಟಿಗೆ ಕುಳಿತು ಮಾತುಕತೆ ನಡೆಸಿದ್ದಾರೆ. ಇನ್ನೊಂದು ವಿಷ್ಯ ಅಂದ್ರೆ ನಿನ್ನೆ ಡಿಕೆಶಿ ಸ್ವಾಗತಕ್ಕೆ ಸಿದ್ದರಾಮಯ್ಯ ಕೂಡ ಗೈರಾಗಿದ್ದರು. ಜೊತೆಗೆ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.

Contact Us for Advertisement

Leave a Reply