ಪೆಗಾಸಸ್ ಗಲಾಟೆಗೆ ಒಂದು ವಾರದ ಅಧಿವೇಶನ ಬಲಿ!

masthmagaa.com:

ಮಳೆಗಾಲದ ಅಧಿವೇಶನ ಶುರುವಾಗಿ ಒಂದು ವಾರ ಕಳೆದ್ರೂ ಆರೋಗ್ಯಕರ ಚರ್ಚೆ ಸಾಧ್ಯವಾಗ್ತಲೇ ಇಲ್ಲ. ವಿಪಕ್ಷಗಳು ಪ್ರತಿದಿನವೂ ಪೆಗಾಸಸ್​​ ಸೇರಿದಂತೆ ಹಲವು ವಿಚಾರ ಮುಂದಿಟ್ಟು ಗಲಾಟೆ ಮಾಡ್ಕೊಂಡೇ ಬಂದಿವೆ. ಪೆಗಾಸಸ್ ವಿಚಾರದಲ್ಲಿ ಪ್ರಧಾನಿ ಮೋದಿಯವರೇ ಸ್ಪಷ್ಟನೆ ನೀಡ್ಬೇಕು ಅಂತ ಪಟ್ಟು ಹಿಡ್ಕೊಂಡು ಕೂತಿವೆ. ಅದ್ರಲ್ಲೂ ಕಾಂಗ್ರೆಸ್ ಅಂತೂ ಗೃಹಸಚಿವ ಅಮಿತ್ ಶಾ ರಾಜೀನಾಮೆ ನೀಡ್ಬೇಕು. ಪ್ರಧಾನಿ ಮೋದಿ ವಿರುದ್ಧ ತನಿಖೆ ನಡೀಬೇಕು ಅಂತ ಕಿಡಿಕಾರಿದೆ. ಇವತ್ತು ಕೂಡ ರಾಜ್ಯಸಭೆ ಮತ್ತು ಲೋಕಸಭೆ.. ಎರಡೂ ಸದನಗಳಲ್ಲಿ ಗಲಾಟೆ ಗೌಜಿ ಜೋರಾಗಿತ್ತು. ಹೀಗಾಗಿ ಪದೇ ಪದೇ ಕಲಾಪವನ್ನು ಮುಂದೂಡಬೇಕಾಯ್ತು. ಹೀಗಾಗಿ ವಿಪಕ್ಷ ನಾಯಕರ ಮನವೊಲಿಸುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೈಹಾಕಿದೆ. ಅದರಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಇವತ್ತು ಕಾಂಗ್ರೆಸ್​​​ ನಾಯಕ ಮನೀಶ್ ತಿವಾರಿ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್​​ನ ಸುಪ್ರಿಯಾ ಸುಲೆ ಜೊತೆ ಮಾತುಕತೆ ನಡೆಸಿದ್ದಾರೆ. ಮತ್ತೊಂದ್ಕಡೆ ಗೃಹಸಚಿವ ಅಮಿತ್ ಶಾ ಕೂಡ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಜೊತೆ ಸದ್ಯದ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ.

-masthmagaa.com

Contact Us for Advertisement

Leave a Reply