ಚಂದ್ರಯಾನ-3 ನೌಕೆ ಭೂಮಿಗೆ ವಾಪಸ್‌!

masthmagaa.com:

ಭಾರತದ ಹೆಮ್ಮೆಯ ಯೋಜನೆ ಚಂದ್ರಯಾನ-3ರ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದ LMV3 M4 ಉಡಾವಣಾ ವಾಹಕದ ಅವಶೇಷ ಮರಳಿ ಭೂಮಿಗೆ ಬಿದ್ದಿದೆ ಅಂತ ಇಸ್ರೋ ತಿಳಿಸಿದೆ. ನಿನ್ನೆ ಮಧ್ಯಾಹ್ನ ಭೂಮಿಯ ವಾತಾವರಣಕ್ಕೆ ಪ್ರವೇಶಿಸಿದ್ದು, ಭಾರತದ ಭೂಭಾಗದ ಮೇಲೆ ಬೀಳದೆ ಉತ್ತರ ಪೆಸಿಫಿಕ್ ಸಾಗರದಲ್ಲಿ ಬಿದ್ದಿದೆ ಅಂತ ಇಸ್ರೋ ಮಾಹಿತಿ ನೀಡಿದೆ. ಅಂದ್ಹಾಗೆ ವಿಶ್ವಸಂಸ್ಥೆ ಮತ್ತು ಐಎಡಿಸಿ ಮಾರ್ಗಸೂಚಿಗಳ ಪ್ರಕಾರ ಆಕಸ್ಮಿಕ ಸ್ಫೋಟಗಳ ಅಪಾಯವನ್ನು ಕಡಿಮೆ ಮಾಡಲು ರಾಕೆಟ್‌ನಲ್ಲಿರುವ ಎಲ್ಲಾ ಇಂಧನ ಮತ್ತು ಶಕ್ತಿಯ ಮೂಲಗಳನ್ನ ಖಾಲಿ ಮಾಡಲು ರಾಕೆಟ್‌ನ ಅಪ್ಪರ್‌ ಸ್ಟೇಜನ್ನ passivation ಗೆ ಒಳಪಡಿಸಲಾಗಿತ್ತು. ಅಂದ್ರೆ ವೆಹಿಕಲ್‌ನ ಇಂಟರ್ನಲ್‌ ಎನರ್ಜಿಯನ್ನ ಖಾಲಿ ಮಾಡಲಾಗಿತ್ತು. ಯಾಕಂದ್ರೆ ಮಿಷನ್‌ ಕಂಪ್ಲೀಟ್‌ ಆದ ಬಳಿಕ ರಾಕೆಟ್‌ನಲ್ಲಿ ಇಂಧನ ಉಳಿದುಕೊಂಡಿದ್ರೆ, ಅದು ಭೂಮಿಗೆ ಮರಳಿದಾಗ ಸ್ಫೋಟಗೊಳ್ಳುವ ಸಾಧ್ಯತೆಯಿರುತ್ತೆ. ಅಥ್ವಾ ಒಂದು ವೇಳೆ ಬಾಹ್ಯಾಕಾಶದಲ್ಲೇ ಸ್ಫೋಟಗೊಂಡ್ರೆ ಬಾಹ್ಯಾಕಾಶ ತ್ಯಾಜ್ಯವಾಗಿ ಕನ್ವರ್ಟ್‌ ಆಗಿ ಅದ್ರಿಂದ ಇತರ ಉಪಗ್ರಹಗಳಿಗೆ ತೊಂದ್ರೆ ಉಂಟಾಗೋ ಚಾನ್ಸಸ್‌ ಇರುತ್ತೆ. ಹೀಗಾಗಿ ಈ ಮೆಥಡ್‌ನ್ನ ಫಾಲೋ ಮಾಡಲಾಗುತ್ತೆ. ಇದು ಬಾಹ್ಯಾಕಾಶದಲ್ಲಿ ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸಿ ನಡೆದುಕೊಳ್ಳುವ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ ಅಂತ ಇಸ್ರೋ ಹೇಳಿದೆ.

-masthmagaa.com

Contact Us for Advertisement

Leave a Reply