ತೈವಾನ್​ ರೈಲು ದುರಂತ: ಘಟನೆಗೆ ಕಾರಣವಾದ ವ್ಯಕ್ತಿಯ ಬಂಧನಕ್ಕೆ ಸಿದ್ಧತೆ

masthmagaa.com:

ತೈವಾನ್​ನಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಸುರಂಗದ ಒಳಗಿರೋ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ಮೃತದೇಹಗಳು ಸಿಲುಕಿರೋ ಸಾಧ್ಯತೆ ಇದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹಳಿಮೇಲೆ ಬರುವಂತೆ ನಿಲ್ಲಿಸಿದ್ದ ಟ್ರಕ್​​ಗೆ ಡಿಕ್ಕಿ ಹೊಡೆದಿದ್ದೇ ದುರಂತಕ್ಕೆ ಕಾರಣ ಅಂತ ಅಂದಾಜಿಸಲಾಗಿದೆ. ಅಂದ್ಹಾಗೆ ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಕಟ್ಟಡವೊಂದರ ನಿರ್ಮಾಣ ಕೆಲಸ ನಡೀತಿದೆ. ಅವರಿಗೆ ಸೇರಿದ ಟ್ರಕ್​ನಿಂದಲೇ ಇದೆಲ್ಲಾ ಆಗಿದೆ. ಹೀಗಾಗಿ ಇಷ್ಟೆಲ್ಲಾ ಅನಾಹುತಕ್ಕೆ ಕಂಸ್ಟ್ರಕ್ಷನ್​ ಸೈಟ್​ನ ಮ್ಯಾನೇಜರ್​ನ ನಿರ್ಲಕ್ಷ್ಯವೇ ಕಾರಣ ಎನ್ನಲಾಗ್ತಿದ್ದು. ಆತನನ್ನ ಅರೆಸ್ಟ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply