ವಿಮಾನದಲ್ಲಿ ರೂಲ್ಸ್ ಫಾಲೋ ಮಾಡದಿದ್ರೆ ‘ನೋ-ಫ್ಲೈ ಲಿಸ್ಟ್​’ಗೆ ಸೇರ್ತೀರಿ!

masthmagaa.com:

ಕೊರೋನಾ ನಿಯಮ ಮತ್ತು ಮಾರ್ಗಸೂಚಿಗಳನ್ನ ಪಾಲಿಸದೇ ಇರೋ ವಿಮಾನ ಪ್ರಯಾಣಿಕರನ್ನ ‘ನೋ-ಫ್ಲೈ ಲಿಸ್ಟ್’​ಗೆ ಸೇರಿಸುಂತೆ ಏರ್​ಪೋರ್ಟ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಅಂತ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.  ನೋ-ಫ್ಲೈ ಲಿಸ್ಟ್​ನಲ್ಲಿ ಇರೋರು ಇಂತಿಷ್ಟು ದಿನದವರೆಗೆ ವಿಮಾನ ಹತ್ತೋಕೆ ಅವಕಾಶವಿರಲ್ಲ.

ಇನ್ನು ನಾವು ಕೊರೋನಾ ವಿರುದ್ಧ ಗೆಲ್ಲಬಹುದು. ಆದ್ರೆ ಕೆಲವೊಂದಷ್ಟು ಜನರ ನಿರ್ಲಕ್ಷ್ಯದಿಂದ ಸಮಸ್ಯೆ ಆಗ್ತಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಬಸ್​, ರೈಲುಗಳಲ್ಲಿ ಪ್ರಯಾಣ ಮಾಡೋದಕ್ಕೆ ಹೋಲಿಸಿದ್ರೆ ವಿಮಾನದಲ್ಲಿ ಪ್ರಯಾಣ ಮಾಡೋದು ತುಂಬಾ ಸೇಫ್ ಅಂತಾನೂ ಹರ್ದೀಪ್​ ಸಿಂಗ್ ಪುರಿ ಹೇಳಿದ್ರು.

-masthmagaa.com

Contact Us for Advertisement

Leave a Reply