ಚೀನಾದಲ್ಲಿ ಸಾವಿರ ವರ್ಷಗಳ ಬಳಿಕ ದಾಖಲೆ ಮಳೆ

masthmagaa.com:

ಚೀನಾದಲ್ಲಿ ಪ್ರವಾಹ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ತಿದೆ. ಅದ್ರಲ್ಲೂ ಸೆಂಟ್ರಲ್ ಚೀನಾದ ಹೆನಾನ್​​​ನಲ್ಲಿ ಭಾರಿ ಮಳೆಯಾಗ್ತಿದ್ದು, ಭೀಕರ ಪ್ರವಾಹ ಉಂಟಾಗಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಗಂಭೀರ ಪರಿಸ್ಥಿತಿ ತಲೆದೋರಿದೆ ಅಂತ ಅಧ್ಯಕ್ಷ ಶಿ ಜಿನ್​ಪಿಂಗ್ ಹೇಳಿದ್ದಾರೆ. ಹಲವು ಡ್ಯಾಮ್​ಗಳು ಒಡೆದು ಅಪಾರ ಪ್ರಮಾಣದ ಸಾವು ನೋವಿನ ಜೊತೆಗೆ ಆಸ್ತಿಪಾಸ್ತಿಗೂ ಹಾನಿಯಾಗಿದೆ ಅಂತ ತಿಳಿಸಿದ್ದಾರೆ. ಸದ್ಯ ಹೆನಾನ್​​ನಲ್ಲಿ 1 ಕೋಟಿಯಷ್ಟು ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ಕರ್ಕೊಂಡು ಹೋಗಲಾಗಿದೆ. ಇನ್ನು ಹೆನಾನ್​​ನ ಝೆಂಗ್​ಶೌನಲ್ಲಿ ಸಾವಿರ ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಇಲ್ಲಿ ರೈಲುಗಳ ಒಳಗೆಲ್ಲಾ ನೀರು ನುಗ್ಗಿದ್ದು, ಅದ್ರಲ್ಲಿ ಸಿಲುಕಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಐವರು ಗಾಯಗೊಂಡಿದ್ದು, ನೂರಾರು ಜನರನ್ನು ರೈಲಿನಿಂದ ಹೊರಗೆ ಕರೆತರಲಾಗಿದೆ. ಎದೆಮಟ್ಟದವರೆಗೆ ನೀರು ಬಂದಿದ್ದು, ರೈಲಿನಲ್ಲಿ ಸಿಲುಕಿರೋ ಕೆಲ ಜನರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಯೆಲ್ಲೋ ನದಿ ದಡದಲ್ಲಿ 1.2 ಕೋಟಿ ಜನ ವಾಸವಿದ್ದು, ಈಗಾಗಲೇ ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಹೆನಾನ್​​ನಲ್ಲಿ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ. ವಿಮಾನ ಸಂಚಾರದಲ್ಲೂ ವ್ಯತ್ಯಯವಾಗಿದ್ದು, ಕೆಲವು ವಿಮಾನಗಳು ತಡವಾದ್ರೆ, ಇನ್ನು ಕೆಲವನ್ನು ರದ್ದು ಮಾಡಲಾಗಿದೆ. ಬಹುತೇಕ ಹೆದ್ದಾರಿಗಳನ್ನು ಕೂಡ ಬಂದ್ ಮಾಡಲಾಗಿದೆ.

ಇನ್ನು ಪಶ್ಚಿಮ ಯೂರೋಪ್​​ನಲ್ಲೂ ಪ್ರವಾಹ ಪರಿಸ್ಥಿತಿ ಕೈಮೀರಿಹೋಗಿದೆ. ಇಲ್ಲಿ ಮೃತಪಟ್ಟವರ ಸಂಖ್ಯೆ 200ಕ್ಕೆ ಏರಿಕೆಯಾಗಿದೆ. ಬೆಲ್ಜಿಯಂ ಮತ್ತು ಜರ್ಮನಿ ಪ್ರವಾಹದ ಹೊಡೆತಕ್ಕೆ ನೇರವಾಗಿ ಸಿಲುಕಿದ್ದು, ಅಪಾರ ಪ್ರಮಾಣದ ಹಾನಿ ಅನುಭವಿಸಿದೆ. ಜರ್ಮನಿಯಲ್ಲಿ 169 ಮಂದಿ ಪ್ರಾಣ ಬಿಟ್ಟಿದ್ದು, ಬೆಲ್ಜಿಯಂನಲ್ಲಿ 31 ಮಂದಿ ಜೀವ ಕಳ್ಕೊಂಡಿದಾರೆ.

-masthmagaa.com

Contact Us for Advertisement

Leave a Reply