PhD ಪರೀಕ್ಷೆ ಬರೆಯಲು ಮುಂದಾದ ಪವಿತ್ರಾ ಲೋಕೇಶ್‌: ನಟ ನರೇಶ್‌ ಮಾಡಿದ್ದೇನು?

masthmagaa.com:

ಸದ್ಯ ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಮತ್ತೆ ಮದುವೆ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿ ಇದಾರೆ. ಇದೇ ಬ್ಯೂಸಿ ಶೆಡ್ಯುಲ್‌ ಅಲ್ಲಿ ಪವಿತ್ರಾ ಲೋಕೇಶ್‌ ಅವರು PHD ಎಂಟ್ರೆನ್ಸ್‌ ಎಕ್ಸಾಮ್‌ ಬರೆದು ಮಾದರಿಯಾಗಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪವಿತ್ರಾ ಲೋಕೇಶ್‌ ಹಂಪಿಯಲ್ಲಿ PhD ಎಂಟ್ರೆನ್ಸ್‌ ಎಕ್ಸಾಮ್‌ ಬರೆದು ಬಂದಿರೋದಾಗಿ ತಿಳಿಸಿದ್ದಾರೆ. “ಮತ್ತೆ ಮದುವೆ ಸಿನಿಮಾದ ಪ್ರಮೋಷನ್‌ ಅಲ್ಲೇ ಬ್ಯೂಸಿ ಇದೀನಿ, ಹಾಗಾಗಿ ನನ್ನ ಹೆಸರು ಬಂದಿದ್ದೂ ನನಗೆ ಗೊತ್ತಿರಲಿಲ್ಲ, ಎಕ್ಸಾಮ್‌ಗೆ ಬರೀ 4 ದಿನ ಮಾತ್ರ ಇತ್ತು, ನರೇಶ್‌ ಅವರಿಗೆ ಕೇಳ್ದೆ, ಏನ್‌ ಮಾಡ್ಲಿ ಅಂತ ನೀ ಬರೀಲೇ ಬೇಕು ಅಂತ ಅವರೂ ಹೇಳಿದ್ರು. ಹಾಗಾಗಿ ಎಕ್ಸಾಮ್‌ಗೆ ಪ್ರಿಪೇರ್‌ ಆಗಿ ನರೇಶ್‌ ಅವರೇ ನನ್ನನ್ನ ಹಂಪಿಗೆ ಕರೆದುಕೊಂಡು ಹೋಗಿದ್ರು” ಅಂತ ಹೇಳಿದ್ದಾರೆ.

“ಒಬ್ಬ ಆರ್ಟಿಸ್ಟ್‌ ಆಗಿ ಯಾರೂ ಕೂಡ ಎಕ್ಸಾಮ್‌ ಬರಿಯೋದಕ್ಕೆ ಇಷ್ಟ ಪಡೋದಿಲ್ಲ, ಆದ್ರೆ ಪವಿತ್ರಾಗೆ ಎಕ್ಸಾಮ್‌ ಬರೀಬೇಕು, ಮತ್ತೂ ಕಲೀಬೇಕು ಅನ್ನೋ ಹಠ ಇದೆ, ಹಾಗಾಗಿ ನನ್ನ ಸಪೋರ್ಟ್‌ ಯಾವಗಾಲೂ ಅವಳಿಗೆ ಇರತ್ತೆ” ಅಂತ ನರೇಶ್‌ ಹೇಳಿದ್ದಾರೆ.

“ಸಿನಿಮಾ ಇಂಡಸ್ಟಿಯಲ್ಲಿ ಮಹಿಳೆಯರು ಯಾವ್‌ ರೀತಿ ಕಷ್ಟಗಳನ್ನ ಅನುಭವಿಸ್ತಾರೆ, ಮನೆ ಸಂಸಾರ ಸಿನಿಮಾ ರಂಗವನ್ನ ಯಾವ್‌ ರೀತಿ ನಿಭಾಯಿಸ್ತಾರೆ ಅನ್ನೋ ಸಬ್ಜಕ್ಟ್‌ ಅನ್ನ ಆಯ್ಕೆ ಮಾಡಿಕೊಳ್ಳಬೇಕು ಅಂತ ಇದೀನಿ” ಎಂದು ಪವಿತ್ರಾ ಲೋಕೇಶ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply