ಹೆಣ್ಣು ಮಗುವಿನ ತಂದೆಯಾದ ಪವನ್‌ ಒಡೆಯರ್‌!

masthmagaa.com:

ನಟ ಸಾರ್ವಭೌಮ, ಗೂಗ್ಲಿಯಂತಹ ಸೂಪರ್‌ ಹಿಟ್‌ ಸಿನಿಮಾಗಳನ್ನ ನೀಡಿ ಜನರ ಮೆಚ್ಚುಗೆ ಗಳಿಸಿದ್ದ ಪವನ್‌ ಒಡೆಯರ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಪವನ್‌ ಒಡೆಯರ್‌ ಮತ್ತು ಅಪೇಕ್ಷಾ ದಂಪತಿ ಹೆಣ್ಣು ಮಗುವನ್ನ ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದಾರೆ. ಹೊಸ ಸದಸ್ಯೆಯ ಆಗಮನದಿಂದ ಕುಟುಂಬದಲ್ಲಿ ಖುಷಿ ಮನೆಮಾಡಿದೆ. ಮಗು ಹುಟ್ಟಿದ ವಿಷಯವನ್ನ ಪವನ್‌ ಒಡೆಯರ್‌ ತಮ್ಮ ಇನ್ಸ್ಟಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಪೇಕ್ಷಾ ಪುರೋಹಿತ್‌ ಅವರ ಜೊತೆಗಿನ ಫೋಟೋ ಶೇರ್‌ ಮಾಡಿ, “ಹೆಣ್ಣು ಮಗು ಜನಿಸಿದೆ” ಅಂತ ಕ್ಯಾಪ್ಷನ್‌ ಕೊಟ್ಟಿದ್ದಾರೆ.

‘ಶುಭಾಶಯಗಳು ಅಪೇಕ್ಷಾ ಮತ್ತು ಪವನ್’ ಅಂತ ನಿಧಿ ಸುಬ್ಬಯ್ಯ ಕಾಮೆಂಟ್‌ ಮಾಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರಾ ಅಂತ ಅಭಿಮಾನಿಗಳು ಆರೋಗ್ಯ ವಿಚಾರಿಸಿದ್ದಾರೆ.

-masthmagaa.com

Contact Us for Advertisement

Leave a Reply