ಪಾಕ್‌ ಕ್ರಿಕೆಟ್‌ ಟೀಂ ಕ್ಯಾಪ್ಟನ್ಸಿಗೆ ಗುಡ್‌ಬಾಯ್‌ ಹೇಳಿದ ಬಾಬರ್!

masthmagaa.com:

ಪಾಕಿಸ್ತಾನ್‌ 2023ರ ವಿಶ್ವಕಪ್‌ನ ಗ್ರೂಪ್‌ ಸ್ಟೇಜ್‌ನಲ್ಲೇ ಇಂಪ್ಯಾಕ್ಟ್‌ ಮಾಡದೆ ಹೊರಗೋದ ಬೆನ್ನಲ್ಲೇ ಮೂರು ಫಾರ್‌ಮ್ಯಾಟ್‌ಗಳ ನಾಯಕತ್ವಕ್ಕೆ ಬಾಬರ್‌ ಅಜಂ ಗುಡ್‌ಬಾಯ್‌ ಹೇಳಿದ್ದಾರೆ. 4 ವರ್ಷಗಳ ಸುಧೀರ್ಘ ಕ್ಯಾಪ್ಟನ್ಸಿಗೆ ಫುಲ್‌ಸ್ಟಾಪ್‌ ಹಾಕೊ ನಿರ್ಧಾರವನ್ನ Xನ ಪೋಸ್ಟ್‌ ಒಂದ್ರ ಮೂಲಕ ಅನೌನ್ಸ ಮಾಡಿದ್ದಾರೆ. “ಕಳೆದ 4 ವರ್ಷಗಳಲ್ಲಿ ಕ್ರಿಕೆಟಿಂಗ್‌ ವರ್ಲ್ಡ್‌ನಲ್ಲಿ ಪಾಕಿಸ್ತಾನಕ್ಕಿರೊ ಗೌರವವನ್ನ ಕಾಪಾಡೋಕೆ ಎಲ್ಲಾ ತರಹದ ಎಫರ್ಟ್‌ ಹಾಕಿದ್ದೀನಿ. ಬಹಳಷ್ಟು ಏಳು-ಬೀಳುಗಳಿಗೆ ಈ ಜರ್ನಿ ಸಾಕ್ಷಿಯಾಗಿದೆ. ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ನಂಬರ್‌ ಒನ್‌ ಸ್ತಾನಕ್ಕೇರಿದ್ದು ಬಹಳ ಮೆಮೊರೆಬಲ್‌, ಅದು ಸಂಪೂರ್ಣ ತಂಡ, ಕೋಚ್‌ಗಳ ಸಹಕಾರದಿಂದ ಸಾಧ್ಯವಾಯ್ತು. ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳಿಗೆ ಈ ವೇಳೆ ಥ್ಯಾಂಕ್ಸ್‌ ಹೇಳೋಕೆ ಇಷ್ಟ ಪಡ್ತೇನೆ. ಇದು ಕಷ್ಟವಾದ ಡಿಸಿಷನ್‌, ಆದ್ರೆ ಈ ನಿರ್ಧಾಕ್ಕೆ ಬರೋಕೆ ಇದು ಸರಿಯಾದ ಸಮಯ” ಅಂತ ಬಾಬರ್ ಭಾವುಕರಾಗಿದ್ದಾರೆ. ಇನ್ನು ಬಾಬರ್‌ ರಾಜಿನಾಮೆ ನೀಡಿದ ಬೆನ್ನಲ್ಲೆ PCB ಹೊಸ ನಾಯಕರನ್ನ ಅನೌನ್ಸ್‌ ಮಾಡಿದೆ. ಫಾಸ್ಟ್‌ ಬೌಲರ್‌ಗಳಾದ ಶಾಹಿನ್‌ ಅಫ್ರಿದಿ ಹಾಗೂ ಶಾನ್‌ ಮಸೂದ್‌, ಕ್ರಮವಾಗಿ ಟಿ-20 ಮತ್ತು ಟೆಸ್ಟ್‌ ಕ್ರಿಕೆಟ್‌ ಟೀಮ್‌ಗಳ ನಾಯಕರಾಗಿ ನೇಮಿಸಲಾಗಿದೆ. ಇದೇ ವೇಳೆ ಮೊಹಮದ್‌ ಹಫೀಸ್‌ ಅವ್ರನ್ನ ಟೀಮ್‌ ಡೈರೆಕ್ಟರ್‌ ಆಗಿ ನೇಮಿಸಲಾಗಿದೆ ಅಂತ PCB ಹೇಳಿದೆ. ODI ಫರ್ಮ್ಯಾಟ್‌ಗೆ ನಾಯಕನ ಸೆಲೆಕ್ಶನ್‌ ಆಗ್ಬೇಕಿದೆ. ಅಂದ್ಹಾಗೆ ಪಾಕ್‌ 2025ಕ್ಕೆ ODI ಚಾಂಪಿಯನ್ಸ್‌ ಟ್ರೋಫಿ ಹೋಸ್ಟ್‌ ಮಾಡ್ತಿದೆ. ಹಾಗಾಗಿ ಈ ಡಿಸಿಷನ್‌ ತುಂಬಾ ಇಂಪಾರ್ಟೆಂಟ್‌ ಆಗತ್ತೆ.

-masthmagaa.com

Contact Us for Advertisement

Leave a Reply