ನೀವು ಕ್ರಿಕೆಟ್‌ ಆಡೋಕೆ ಬರಲ್ಲ ಅಂದ್ರೆ ಹಣ ಕೊಡಿ: ಪಾಕ್‌ ಕ್ರಿಕೆಟ್‌

masthmagaa.com:

2025ಕ್ಕೆ ಪಾಕಿಸ್ತಾನದಲ್ಲಿ ನಡೆಯೋ ಚಾಂಪಿಯನ್ಸ್‌ ಟ್ರೋಫಿಗೆ ಭದ್ರತಾ ಕಾರಣ ನೀಡಿ ಭಾರತ ತಂಡ ಬರಲು ನಿರಾಕರಿಸಿದ್ರೆ ಪಾಕ್‌ಗೆ ಪರಿಹಾರ ಕೊಡ್ಬೇಕು ಅಂತ ಪಾಕಿಸ್ತಾನ್‌ ಕ್ರಿಕೆಟ್‌ ಬೋರ್ಡ್(‌PCB) ಹೇಳಿದೆ. ಅಷ್ಟೇ ಅಲ್ಲದೆ, ಈಗ ಪಾಕ್‌ನಲ್ಲಿ ನಡೆಸೋಕೆ ಡಿಸೈಡ್‌ ಆಗಿರೊ ಈ ಟೂರ್ನಿ ಭಾರತ ಬರಲ್ಲ ಅನ್ನೋ ಕಾರಣಕ್ಕೆ ಬೇರೆ ಕಡೆಗೆ ಸ್ಥಳಾಂತರ ಆದ್ರೆ, ಆಗ್ಲೂ ಕೂಡ ಭಾರತ ನಮಗೆ ಪರಿಹಾರ ಕೊಡ್ಬೇಕು ಅಂತ PCB ಹೇಳಿದೆ. ಟಾಪ್‌ ಟೀಮ್‌ಗಳೆಲ್ಲ ಪಾಕಿಸ್ತಾಕ್ಕೆ ಬಂದು ಟೂರ್ನಮೆಂಟ್‌ ಆಡಿವೆ. ಭಾರತ ಯಾಕೆ ಬರ್ತಿಲ್ಲ? ನಾವು ಬೇಕಾದ್ರೆ ಭಾರತ ಸೇರಿದಂತೆ ಎಲ್ಲಾ ದೇಶಗಳಿಗೂ ಪಾಕ್‌ ಸರ್ಕಾರ ಹಾಗೂ ಭದ್ರತಾ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸೋಕೆ ವ್ಯವಸ್ಥೆ ಮಾಡ್ತೀವಿ ಅಂತ PCB ಹೇಳಿದೆ. ಅಂದ್ಹಾಗೆ ಪಾಕ್‌ನಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಸೋ ಕುರಿತು ICC ಈಗಾಗ್ಲೆ ಗ್ರೀನ್‌ ಸಿಗ್ನಲ್‌ ನೀಡಿದ್ರೂ, ಈ ಬಗ್ಗೆ ಅವಶ್ಯಕ ಒಪ್ಪಂದಕ್ಕೆ ಇನ್ನೂ ICC ಸಹಿ ಮಾಡಿಲ್ಲ.

-masthmagaa.com

Contact Us for Advertisement

Leave a Reply