ಇಂತಹ ತಂತ್ರಜ್ಞಾನ ಇದ್ರೇನೇ ನೆಮ್ಮದಿಯಲ್ಲಿ ಇರಲು ಸಾಧ್ಯ: ಪೆಗಾಸಸ್​​​

masthmagaa.com:

ಪೆಗಾಸಸ್ ಗೂಢಚರ್ಯೆ ಬಗ್ಗೆ ವಿಶ್ವದಾದ್ಯಂತ ಸುದ್ದಿಯಾಗ್ತಿರುವ ಹೊತ್ತಲ್ಲೇ ಇದ್ರ ನಿರ್ಮಾತೃ ಸಂಸ್ಥೆ ಇಸ್ರೇಲ್​​ನ ಸೈಬರ್ ಸೆಕ್ಯೂರಿಟಿ ಕಂಪನಿ ಎನ್​ಎಸ್​​ಒ ಸಮರ್ಥನೆ ಮಾಡ್ಕೊಂಡಿದೆ. ಗುಪ್ತಚರ ಇಲಾಖೆ ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳ ಬಳಿ ಈ ರೀತಿಯ ಟೆಕ್ನಾಲಜಿ ಇರೋದ್ರಿಂದಾನೇ ಲಕ್ಷಾಂತರ ಜನ ನೆಮ್ಮದಿಯಿಂದ ನಿದ್ರೆ ಮಾಡೋಕೆ.. ಸೇಫಾಗಿ ರಸ್ತೆಯಲ್ಲಿ ನಡ್ಕೊಂಡು ಹೋಗೋಕೆ ಸಾಧ್ಯವಾಗ್ತಿದೆ ಅಂತ ಸಂಸ್ಥೆ ಹೇಳಿದೆ. ಈ ತಂತ್ರಜ್ಞಾನವನ್ನು ನಾವು ಆಪರೇಟ್ ಮಾಡಲ್ಲ.. ಒಂದು ಸಲ ಈ ತಂತ್ರಜ್ಞಾನವನ್ನು ಸೇಲ್ ಮಾಡಿದ್ಮೇಲೆ ನಮ್ಮ ಗ್ರಾಹಕರಿಂದ ಡೇಟಾ ಕೂಡ ನಮಗೆ ಸಿಗೋದಿಲ್ಲ ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply