ಪೆಗಾಸಸ್​​​​ ಮೂಲಕ ಕೈ-ದಳ ಸಮ್ಮಿಶ್ರ ಸರ್ಕಾರದ ಮೇಲೆ ಕಣ್ಗಾವಲು!

masthmagaa.com:

ಪೆಗಾಸಸ್ ಸ್ಪೈವೇರ್ ಮೂಲಕ ದೇಶದ ನೂರಾರು ಪತ್ರಕರ್ತರು, ರಾಜಕಾರಣಿಗಳು, ಸಚಿವರು, ಮಾನವ ಹಕ್ಕು ಹೋರಾಟಗಾರರು ಮತ್ತು ವಿಪಕ್ಷ ನಾಯಕರ ರಹಸ್ಯವಾಗಿ ಕಣ್ಣಿಟ್ಟ ವಿಚಾರದಲ್ಲಿ ಇವತ್ತು ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಶಾಕಿಂಗ್ ವಿಚಾರ ಅಂದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಪೆಗಾಸಸ್ ಮೂಲಕ ಗೂಢಚರ್ಯೆ ನಡೆದಿತ್ತು ಅನ್ನೋದು ಅನ್ನೋ ಅನುಮಾನ ಮೂಡಿದೆ. 2019ರಲ್ಲಿ ದೊಡ್ಡ ರಾಜಕೀಯ ಹೈಡ್ರಾಮಾ ನಡೆದು ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಬಿದ್ದು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಈ ಅವಧಿಯಲ್ಲಿ ಕೆಲ ಪ್ರಮುಖರ ಮೇಲೆ ಕಣ್ಗಾವಲು ಇಡಲಾಗಿತ್ತು. ಡಿಸಿಎಂ ಆಗಿದ್ದ ಜಿ ಪರಮೇಶ್ವರ್, ಕುಮಾರಸ್ವಾಮಿಯವರ ಕಾರ್ಯದರ್ಶಿಗಳು, ಮಾಜಿ ಸಿಎಂ ಸಿದ್ದರಾಮಯ್ಯ ನಂಬರ್‍ಗಳು ಕೂಡ ಇವರ ಟಾರ್ಗೆಟ್‍ಗೆ ಒಳಗಾಗಿರೋ ಸಾಧ್ಯತೆ ಇದೆ ಅಂತ ರಾಷ್ಟ್ರೀಯ ಮಾಧ್ಯಮ ಸಂಸ್ಥೆ ವೈರ್ ವರದಿ ಮಾಡಿದೆ. ಅಷ್ಟೇ ಅಲ್ಲ.. ಫ್ರೆಂಚ್ ಮಾಧ್ಯಮ ಸಂಸ್ಥೆ ಫಾರ್ಬಿಡನ್ ಸ್ಟೋರೀಸ್ ರಿಲೀಸ್ ಮಾಡಿರೋ ದಾಖಲೆಗಳ ಪೈಕಿ ಇವರ ನಂಬರ್ ಸಿಕ್ಕಿರೋದಾಗಿಯೂ ವೈರ್ ಹೇಳಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಮಾಜಿ ಸಿಎಂ ಕುಮಾರಸ್ವಾಮಿ, ಇದೇನು ಹೊಸತಲ್ಲ. ನಂಗೆ ಮೊದ್ಲೇ ಗೊತ್ತಿತ್ತು ಅಂತ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್ ನಾಯಕ ಶಶಿ ತರೂರ್, ಇದನ್ನು ಕೇಂದ್ರ ಸರ್ಕಾರ ಮಾಡಿಲ್ಲ ಅಂತಾದ್ರೆ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರ.. ಅದೇ ಸರ್ಕಾರದ ಸಮ್ಮತಿ ಮೇರೆಗೆ ನಡೆದಿದ್ರೆ, ಇದಕ್ಕೆ ಸ್ಪಷ್ಟನೆ ನೀಡಬೇಕಾಗುತ್ತೆ. ಯಾಕಂದ್ರೆ ಕಾನೂನಿನಲ್ಲಿ ಉಗ್ರರು, ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಮಾತ್ರವೇ ಈ ರೀತಿ ಕಣ್ಗಾವಲು ಇಡಲು ಅವಕಾಶ ಇದೆ. ಅದು ಬಿಟ್ಟು ಬೇರೆ ಸಂದರ್ಭದಲ್ಲಿ ಈ ರೀತಿ ಕಣ್ಗಾವಲು ಇಟ್ರೆ ಅದು ಕಾನೂನು ಬಾಹಿರ ಎಂದಿದ್ದಾರೆ.

ಶಿವಸೇನೆ ವಕ್ತಾರ ಸಂಜಯ್ ರಾವತ್ ಪ್ರತಿಕ್ರಿಯಿಸಿ, ಸಚಿವರಾದ ಪ್ರಹ್ಲಾದ್ ಜೋಷಿ ಮತ್ತು ಅಶ್ವಿನಿ ವೈಷ್ಣವ್ ಅವರ ಮೇಲೂ ನಿಗಾ ಇಡಾಲಾಗಿತ್ತು. ಇದೇ ಒಂದ್ವೇಳೆ ಯುಪಿಎ ಅಧಿಕಾರದಲ್ಲಿದ್ದಾಗ ಆಗಿದ್ರೆ ಬಿಜೆಪಿ ಫುಲ್ ಗಲಾಟೆ ಎಬ್ಬಿಸಿಬಿಡ್ತಿತ್ತು. ಅದೇ ರೀತಿ ಈಗ ನಾವು ತನಿಖೆಗೆ ಒತ್ತಾಯಿಸ್ತಿದ್ದೀವಿ. ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ನಮಗೆ ಸತ್ಯ ಹೇಳಬೇಕು ಅಂತ ಹೇಳಿದ್ದಾರೆ.

2019ರಲ್ಲಿ ಮಾಜಿ ಸಿಜೆ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ರಲ್ವಾ.. ಆ ಮಹಿಳೆಯನ್ನು ಕೂಡ ಕಣ್ಗಾವಲಿನಲ್ಲಿ ಇಡಲಾಗಿತ್ತು ಅನ್ನೋ ಆರೋಪ ಕೇಳಿ ಬಂದಿದೆ. ಅದಕ್ಕೆ ಪ್ರತಿಕ್ರಿಯಿಸಿದ ರಂಜನ್ ಗೊಗೊಯ್, ನಾನು ಈಗ ಅದ್ರ ಬಗ್ಗೆ ಯಾವುದೇ ಕಮೆಂಟ್ ಮಾಡಲ್ಲ ಅಂತ ಹೇಳಿದ್ದಾರೆ.

ಫ್ರಾನ್ಸ್​​ನಲ್ಲಿ ಮೊರಾಕೊನ್ ಇಂಟಲಿಜೆನ್ಸ್ ಸರ್ವಿಸ್​​​​​​​​​ ಕೆಲ ಪತ್ರಕರ್ತರ ಮೇಲೆ ನಿಗಾ ಇಡಲು ಪೆಗಾಸಸ್ ಬಳಸಿದ್ರು ಅನ್ನೋ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಈಗಾಗಲೇ ತನಿಖೆ ಶುರು ಮಾಡಿದ್ದೀವಿ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply