ಟೊಮೆಟೊ ಕಾಯಲು ಹೈ ಸೆಕ್ಯೂರಿಟಿ!

masthmagaa.com:

ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ನಿದ್ದೆಗೆಡುವಂತೆ ಮಾಡಿರೋದಂತು ಸುಳ್ಳಲ್ಲ. ದೇಶಾದ್ಯಂತ ಟೊಮೆಟೊಗೆ ಬಂಗಾರದಂತ ಬೆಲೆ ಬಂದಿದ್ದು, ಕಳ್ಳರ ಕಾಟ ಕೂಡ ಜಾಸ್ತಿಯಾಗಿದೆ. ಹೀಗಾಗಿ ಟೊಮೆಟೊಗಳನ್ನ ಕಾಯೋದಕ್ಕಾಗಿ ಉತ್ತರ ಪ್ರದೇಶದ ವ್ಯಾಪಾರಿಯೊಬ್ಬರು ಬೌನ್ಸರ್ಸ್‌ ಅಂದ್ರೆ ಇಬ್ಬರು ಬಾಡಿಗಾರ್ಡ್‌ಗಳನ್ನ ನೇಮಿಸಿಕೊಂಡಿದ್ದಾರೆ. ಟೊಮೆಟೊ ಬೆಲೆ ಹೆಚ್ಚಾಗಿರೋದ್ರಿಂದ ಜನರು ಖರೀದಿ ಮಾಡೋ ಬದಲು ಕದಿಯುತ್ತಿದ್ದು, ತೊಂದ್ರೆ ನೀಡ್ತಿದ್ದಾರೆ. ಹೀಗಾಗಿ ನಾನು ಬೌನ್ಸರ್ಸ್‌ಗಳನ್ನ ನೇಮಕ ಮಾಡಿಕೊಂಡಿದ್ದೇನೆ. ಅಲ್ದೆ ಅಂಗಡಿಯಲ್ಲಿ ಟೊಮೆಟೊಗಳಿವೆ. ನಾನು ಗ್ರಾಹಕರೊಂದಿಗೆ ಯಾವುದೇ ವಾದ ಅಥವಾ ಜಗಳ ಮಾಡಲು ಬಯಸುವುದಿಲ್ಲ. ಒಂದು ಕೆಜಿ ಟೊಮೆಟೊ 160 ರೂಪಾಯಿ ಮಾರಾಟವಾಗುತ್ತಿದೆ. ಜನರು 50 ಅಥವಾ 100 ಗ್ರಾಂ ಖರೀದಿಸುತ್ತಿದ್ದಾರೆ ಅಂತ ಅಜಯ್ ಫೌಜಿ ಅನ್ನೊ ತರಕಾರಿ ಮಾರಾಟಗಾರ ತಿಳಿಸಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಕರ್ನಾಟಕದ ಕೋಲಾರ, ಹಾಸನ ಜಿಲ್ಲೆಗಳಲ್ಲಿ ಕೂಡ ರೈತರು ಕಷ್ಟಪಟ್ಟು ಬೆಳೆದ ಟೊಮೆಟೊಗಳನ್ನು ಕಳ್ಳತನ ಮಾಡಿದ್ದರು.

-masthmagaa.com

Contact Us for Advertisement

Leave a Reply