ಚೀನಾ ಬಗ್ಗೆ ಮಹತ್ವದ ದಾಖಲೆ ಬಿಡುಗಡೆ ಮಾಡಿದ ಪೆಂಟಗಾನ್‌! ಏನು ಗೊತ್ತಾ?

masthmagaa.com:

ಅಮೆರಿಕದ ವಿಮಾನಗಳಿಗೆ ಕೇವಲ 2 ವರ್ಷಗಳಲ್ಲಿ ಸುಮಾರು 180 ಕ್ಕೂ ಹೆಚ್ಚು ಬಾರಿ ಚೀನಾದ ವಿಮಾನಗಳು ಅಡ್ಡಿಪಡಿಸಿವೆ ಅಂತ ಅಮೆರಿಕ ಹೇಳಿದೆ. ಈ ಸಂಬಂಧ ʻPentagon’ ಅಂದ್ರೆ ಅಮೆರಿಕಾ ರಕ್ಷಣಾ ಇಲಾಖೆ, ಫೋಟೊ ಮತ್ತು ವೀಡಿಯೋಗಳನ್ನ ರಿಲೀಸ್‌ ಮಾಡಿದೆ. ಈ ಮೂಲಕ ಮುಂದೊಂದಿನ ಇದೇ ಕಾರಣದಿಂದ ಉಭಯ ದೇಶಗಳ ನಡುವೆ ಸಂಘರ್ಷ ಉಂಟಾಗಬಹುದು ಅಂತ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಕಳೆದ 10 ವರ್ಷಗಳಿಗಿಂತ್ಲೂ ಹೆಚ್ಚು, ಕಳೆದ ಕೇವಲ 2 ವರ್ಷಗಳಲ್ಲಿ ಚೀನಾ ಈ ರೀತಿಯ ಕೆಲಸವನ್ನ ಮಾಡಿದೆ ಎಂದಿದೆ. ಚೀನಾದ ಸೇನಾ ತಾಕತ್ತು ಮತ್ತು ಅದರಿಂದ ಇಂಡೋ-ಪೆಸಿಫಿಕ್‌ ಪಾರ್ಟನರ್‌ ದೇಶಗಳಿಗಾಗುವ ಅಪಾಯಗಳನ್ನ ʻPentagon’ ಸಧ್ಯದಲ್ಲೇ ಪ್ರಕಟಿಸಲಿದೆ ಎನ್ನಲಾಗಿದೆ.

 

-masthmagaa.com

Contact Us for Advertisement

Leave a Reply