ನಾವು ಯಾವುದೇ ಗುಪ್ತಚರ ಮಾಹಿತಿ ನೀಡಿಲ್ಲ: ಪೆಂಟಗಾನ್‌

masthmagaa.com:

ಅಮೆರಿಕ ರಕ್ಷಣಾ ಇಲಾಖೆ ರಷ್ಯಾದ ಸೈನಿಕರ ಸ್ಥಳಗಳ ಬಗ್ಗೆ ಯುಕ್ರೇನ್‌ಗೆ ಯಾವುದೇ ಗುಪ್ತಚರ ಮಾಹಿತಿ ಒದಗಿಸಿಲ್ಲ ಅಂತ ಸ್ಪಷ್ಟಪಡಿಸಿದೆ. ರಷ್ಯಾ ಕಮಾಂಡರ್‌ಗಳನ್ನ ಹತ್ಯೆ ಮಾಡೋಕೆ ಅಮೆರಿಕದ CIA ಖುದ್ದಾಗಿ ಯುಕ್ರೇನ್‌ಗೆ ಮಾಹಿತಿ ನೀಡಿತ್ತು ಅಂತ ನೆನ್ನೆ ವರದಿಯೊಂದ್ರಲ್ಲಿ ಹೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಪೆಂಟಗಾನ್‌ ವರದಿಯನ್ನ ತಿರಸ್ಕರಿಸಿದೆ, ಜೊತೆಗೆ ನಾವು ಕೇವಲ ಯುಕ್ರೇನ್‌ಗೆ ಅವ್ರ ದೇಶವನ್ನ ರಕ್ಷಣೆ ಮಾಡಿಕೊಳ್ಳೋಕೆ ಸಹಾಯ ಮಾಡಿದ್ದೇವೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply