ಇನ್ಫೋಸಿಸ್​​ ಬಗ್ಗೆ ಲೇಖನ! ನಮಗೂ ಅದಕ್ಕೂ ಸಂಬಂಧವಿಲ್ಲ ಎಂದ ಆರ್​ಎಸ್​ಎಸ್​​!

masthmagaa.com:

ಐಟಿ ಇಲಾಖೆಗೆ ಇನ್ಫೋಸಿಸ್​ ರೆಡಿ ಮಾಡಿಕೊಟ್ಟಿದ್ದ ಟ್ಯಾಕ್ಸ್​ ಫೈಲಿಂಗ್​​ ವೆಬ್​ಪೋರ್ಟಲ್​​ನಲ್ಲಿ ತೊಂದ್ರೆ ಕಾಣಿಸಿಕೊಂಡಿರೋದು ಇನ್ನೂ ಸರಿಯಾಗಿಲ್ಲ. ಇದೀಗ ಆರ್​ಎಸ್​ಎಸ್​​ ಜೊತೆ ಲಿಂಕ್ ಹೊಂದಿರೋ ಪತ್ರಿಕೆ ಪಂಚಜನ್ಯದಲ್ಲಿ ಈ ಬಗ್ಗೆ 4 ಪುಟಗಳ ಲೇಖನ ಪ್ರಕಟವಾಗಿದೆ. ಇದ್ರಲ್ಲಿ ವೆಬ್​ಪೋರ್ಟಲ್ ಸಮಸ್ಯೆ ಹಿಂದೆ ದೇಶವಿರೋಧಿಗಳ ಕೈವಾಡ ಇರೋ ಸಾಧ್ಯತೆ ಇದೆ. ಈ ಮೂಲಕ ರಾಷ್ಟ್ರವಿರೋಧಿ ಹಿತಾಸಕ್ತಿಗಳು ದೇಶದ ಆರ್ಥಿಕ ಹಿತಾಸಕ್ತಿಯನ್ನು ಹಾಳು ಮಾಡೋಕೆ ಯತ್ನಿಸುತ್ತಿರಬಹುದಾ ಅಂತ ಪ್ರಶ್ನಿಸಲಾಗಿದೆ. ಆದ್ರೆ ಈ ಲೇಖನದಿಂದ ಆರ್​ಎಸ್​ಎಸ್​ ಅಂತರ ಕಾಯ್ದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಆರ್​ಎಸ್​ಎಸ್​ ವಕ್ತಾರ ಸುನಿಲ್ ಅಂಬೇಕರ್​​​, ದೇಶದ ಸಂಸ್ಥೆಯಾಗಿ ಇನ್ಫೋಸಿಸ್​ ದೇಶದ ಅಭಿವೃದ್ಧಿಗೆ ಸಾಕಷ್ಟು ಮಾಡಿದೆ. ವೆಬ್​​ಪೋರ್ಟಲ್ ಸಂಬಂಧಿತ ಕೆಲವೊಂದು ವಿವಾದ ಇರಬಹುದು. ಆದ್ರೆ ಪಂಜಜನ್ಯದಲ್ಲಿ ಪ್ರಕಟವಾಗಿರೋ ಲೇಖನಕ್ಕೂ ನಮಗೂ ಸಂಬಂಧವಿಲ್ಲ. ಇದು ಆ ಲೇಖಕನ ಅಭಿಪ್ರಾಯ ಅಷ್ಟೆ.. ಪಂಚಜನ್ಯ ನಮ್ಮ ಮುಖವಾಣಿ ಅಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply