ದೆಹಲಿಯಲ್ಲಿ ಎಣ್ಣೆಯೂ ತುಟ್ಟಿ.. ಪೆಟ್ರೋಲ್, ಡೀಸೆಲ್ಲೂ ದುಬಾರಿ..!

masthmagaa.com:

ದೆಹಲಿ ಸರ್ಕಾರ ಪೆಟ್ರೋಲ್‌ ಮೇಲಿನ ವ್ಯಾಟ್‌ ಶೇ. 27ರಿಂದ ಶೇ. 30ಕ್ಕೆ ಹಾಗೂ ಡೀಸೆಲ್‌ ಮೇಲಿನ ವ್ಯಾಟ್‌ ಶೇ. 16.75ರಿಂದ ಶೇ. 30ಕ್ಕೆ ಹೆಚ್ಚಿಸಿದೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 1.67 ರೂಪಾಯಿ ಹಾಗೂ ಡೀಸೆಲ್ ಬೆಲೆ 7.10 ರೂಪಾಯಿ ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರಸ್ತುತ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹71.26 ಹಾಗೂ ಡೀಸೆಲ್‌ಗೆ ₹69.39 ಆಗಿದೆ.

ನಿನ್ನೆಯಷ್ಟೇ ಮದ್ಯದ ಮೇಲೆ ಶೇ. 70ರಷ್ಟು ವಿಶೇಷ ಕೊರೋನಾ ಫೀಸ್ ವಿಧಿಸಿದ ಕೇಜ್ರಿವಾಲ್ ಸರ್ಕಾರ ಎಣ್ಣೆ ಪ್ರಿಯರಿಗೆ ಶಾಕ್ ನೀಡಿತ್ತು. ಇದೀಗ ವಾಹನ ಸವಾರರಿಗೂ ಆಘಾತ ನೀಡಿದಂತಾಗಿದೆ. ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿರುವ ಸರ್ಕಾರಗಳು ತೈಲದ ಮೇಲಿನ ವ್ಯಾಟ್‌ ಹಾಗೂ ಮದ್ಯ ಮಾರಾಟದ ಮೇಲೆ ವಿಶೇಷ ತೆರಿಗೆಗಳನ್ನ ವಿಧಿಸಿ ಹಣ ಸಂಗ್ರಹಿಸುವ ಲೆಕ್ಕಾಚಾರ ನಡೆಸುತ್ತಿವೆ.

-masthmagaa.com

Contact Us for Advertisement

Leave a Reply