ಬಾಲಿವುಡ್ ಬೆಡಗಿ ಜೊತೆ ಕೆ.ಎಲ್.ರಾಹುಲ್ ಡಿನ್ನರ್..!

ಕೆ.ಎಲ್ ರಾಹುಲ್ ಬಾಲಿವುಡ್ ಬೆಡಗಿ ಅತಿಹ್ಯ ಶೆಟ್ಟಿ ಜೊತೆ ಲವ್‍ನಲ್ಲಿ ಬಿದ್ದಿದ್ದಾರೆ ಅಂತ ಸುದ್ದಿ ಇರೋವಾಗಲೇ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ವಿಶ್ರಾಂತಿಯಲ್ಲಿರುವ ಕೆ.ಎಲ್ ರಾಹುಲ್, ಅತಿಹ್ಯ ಜೊತೆ ಡಿನ್ನರ್‍ಗೆ ಹೋಗಿದ್ದಾರೆ. ಮುಂಬೈನ ಟಾಪ್ ರೆಸ್ಟೋರೆಂಟ್ ಒಂದರಲ್ಲಿ ಇಬ್ಬರೂ ಊಟಕ್ಕೆ ಹೋಗಿದ್ದರು. ಈ ವೇಳೆ ಇಬ್ಬರು ಒಟ್ಟೊಟ್ಟಿಗೆ ಇರುವ ಫೋಟೋಗಳು ಫುಲ್ ವೈಲ್ ಆಗುತ್ತಿವೆ. ಇದರಲ್ಲಿ ಅತಿಹ್ಯ ಕಪ್ಪು ಕೋಟ್ ಮತ್ತು ಬಿಳಿ ಟಾಪ್ ಧರಿಸಿದ್ರೆ, ಕೆ.ಎಲ್ ರಾಹುಲ್ ಜೀನ್ಸ್ ಜಾಕೆಟ್ ಮತ್ತು ವೈಟ್ ಟೀ ಶರ್ಟ್ ಧರಿಸಿದ್ದಾರೆ. ಕಳಪೆ ಪ್ರದರ್ಶನ ನೀಡಿ ಹೊರಗುರುಳಿದಿರುವ ರಾಹುಲ್, ಕಳೆದ ವಾರ ಚಿಲ್ಡ್ ಅಂತ ಒಂದು ಇಮೇಜ್ ಟ್ವಿಟ್ಟರ್‍ನಲ್ಲಿ ಹಾಕಿ ಫುಲ್ ಟ್ರೋಲ್‍ಗೆ ಒಳಗಾಗಿದ್ದರು.

Contact Us for Advertisement

Leave a Reply