masthmagaa.com:

ಜನವರಿ 26ರ ಹಿಂಸಾಚಾರ ಬಳಿಕ ದೆಹಲಿ ಗಡಿ ಭಾಗಗಳಲ್ಲಿ ಪೊಲೀಸರು ಭಾರಿ ಪ್ರಮಾಣದಲ್ಲಿ ಬ್ಯಾರಿಕೇಡ್​ ಹಾಕಿ, ರಸ್ತೆ ಅಗೆದು ಮೊಳೆಗಳನ್ನ ಹಾಕಿಟ್ಟಿದ್ದಾರೆ. ಪ್ರತಿಭಟನಾಕಾರರು ಇನ್ನೊಂದ್ಸಲ ಟ್ರಾಕ್ಟರ್​ ತಂದು ಮೊನ್ನೆ ಮಾಡ್ದಂತೆ ಮಾಡ್ಬಾರ್ದು ಅನ್ನೋದು ಇದ್ರ ಹಿಂದಿನ ಉದ್ದೇಶ. ಆದ್ರಿವತ್ತು ಬೆಳಗ್ಗೆ ಗಾಜಿಪುರ್​ ಗಡಿಯಲ್ಲಿ ಹಾಕಿದ್ದ ಮೊಳೆಗಳನ್ನ ತೆಗೆಯಲಾಯ್ತು. ಇದರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಆದ್ರೆ ಯಾಕೆ ತೆಗೀತಿದ್ದಾರೆ ಅನ್ನೋದು ಗೊತ್ತಾಗಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರೋ ದೆಹಲಿ ಪೊಲೀಸರು, ನಾವು ಮೊಳೆಗಳನ್ನ ತೆಗೆದಿಲ್ಲ. ಬೇರೆ ಕಡೆ ಶಿಫ್ಟ್ ಮಾಡಿದ್ದೇವೆ ಅಂತ ಹೇಳಿದ್ದಾರೆ. ಸೋ ಮೊಳೆಗಳು ಇರುತ್ತೆ, ಆದ್ರೆ ಜಾಗ ಚೇಂಜ್ ಆಗಿದೆ ಅಷ್ಟೇ.

ಮತ್ತೊಂದುಕಡೆ ದೆಹಲಿಯಲ್ಲಿ ನಿಯೋಜಿಸಿರುವ ಎಲ್ಲಾ ಸಿಆರ್​ಪಿಎಫ್​ ಯೂನಿಟ್​ಗಳು ತಮ್ಮ ಬಸ್​ಗಳಿಗೆ ವೈರ್​ ಮೆಷ್​ ಅಳವಡಿಸುವಂತೆ ಆದೇಶಿಸಲಾಗಿದೆ. ಈ ಕೆಲಸವನ್ನ ಶನಿವಾರದೊಳಗೆ ಸಮರೋಪಾದಿಯಲ್ಲಿ ಮುಗಿಸುವಂತೆಯೂ ಸೂಚಿಸಲಾಗಿದೆ. ದೆಹಲಿಯಲ್ಲಿ ನಿಯೋಜಿಸಿರುವ ಸಿಆರ್​ಪಿಎಫ್​ ತುಕಡಿಗಳು ಮತ್ತೆರಡು ವಾರ ಅಲ್ಲೇ ಇರುವಂತೆಯೂ ಹೇಳಲಾಗಿದೆ. ಅಂದ್ಹಾಗೆ ಶನಿವಾರ ಹೆದ್ದಾರಿಗಳನ್ನ ಬಂದ್ ಮಾಡಲು ರೈತ ಸಂಘಟನೆಗಳು ಕರೆ ಕೊಟ್ಟಿವೆ. ಹೀಗಾಗಿ ಪೊಲೀಸರು, ಸಿಆರ್​ಪಿಎಫ್ ಮತ್ತು ಆರ್​ಎಎಫ್​ ತುಕಡಿಗಳು ಅಗತ್ಯ ತಯಾರಿ ಮಾಡಿಕೊಳ್ತಿದ್ದಾರೆ.

ಇನ್ನು ಗಾಜಿಪುರ್​ ಗಡಿಯಲ್ಲಿ ವಾಸ್ತವ ಪರಿಸ್ಥಿತಿ ಹೇಗಿದೆ ಅನ್ನೋದನ್ನ ಕಣ್ಣಾರೆ ನೋಡಲು ಮತ್ತು ರೈತ ಮುಖಂಡರನ್ನ ಭೇಟಿಯಾಗಲು ವಿಪಕ್ಷಗಳ ನಿಯೋಗ ಇವತ್ತು ಗಾಜಿಪುರ್​ ಗಡಿಗೆ ಹೋಯ್ತು. ಆದ್ರೆ ಪೊಲೀಸರು ಅವರನ್ನ ಪ್ರತಿಭಟನಾ ಸ್ಥಳಕ್ಕೆ ಹೋಗಲು ಬಿಡಲೇ ಇಲ್ಲ. ಈ ವೇಳೆ ಮಾತನಾಡಿದ ಶಿರೋಮಣಿ ಅಕಾಲಿ ದಳದ ಸಂಸದೆ ಹರ್​ಸಿಮ್ರತ್​ ಕೌರ್ ಬಾದಲ್, ಅನ್ನದಾತರಿಗೆ ನೀಡುತ್ತಿರೋ ಟ್ರೀಟ್​ಮೆಂಟ್​ ನೋಡಿ ಶಾಕ್ ಆಯ್ತು. ರೈತರು ಪ್ರತಿಭಟನೆ ನಡೆಸ್ತಿರುವ ಸ್ಥಳಕ್ಕೆ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳು ಹೋಗೋಕೂ ಆಗಲ್ಲ. ಆ ರೀತಿ ಮಾಡಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.

ಅತ್ತ ಜನವರಿ 26ರ ಟ್ರಾಕ್ಟರ್​ ಪರೇಡ್​ ವೇಳೆ ಕೆಳಗಿ ಬಿದ್ದು ಮೃತಪಟ್ಟಿದ್ದ ರೈತನ ಮನೆಗೆ ಇವತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನೀಡಿದ್ರು.

-masthmagaa.com

Contact Us for Advertisement

Leave a Reply