masthmagaa.com:

ಕೆಲವರಿಗೆ ನೀವು ಕಾಲ್ ಮಾಡ್ದಾಗ ಬಾಲಿವುಡ್​ ನಟ ಅಮಿತಾಬ್ ಬಚ್ಚನ್ ಅವರ ಧ್ವನಿ ಕೇಳೋದನ್ನ ಗಮನಿಸಿರಬಹುದು. ಕೊರೋನಾಗೆ ಸಂಬಂಧಿಸಿದಂತೆ ದೈಹಿಕ ಅಂತರ ಕಾಪಾಡಿ, ಕೈಗಳನ್ನ ಆಗಾಗ ತೊಳೆಯಿರಿ, ಸುರಕ್ಷತೆ ಕಾಪಾಡಿಕೊಳ್ಳಿ, ಎಚ್ಚರ ತಪ್ಪಬೇಡಿ ಅಂತೆಲ್ಲಾ ಆ ಕಾಲರ್ ಟ್ಯೂನ್​ ಮೂಲಕ ಜಾಗೃತಿ ಮೂಡಿಸಲಾಗ್ತಿದೆ. ಆದ್ರೀಗ ಅಮಿತಾಬ್ ಬಚ್ಚನ್ ಧ್ವನಿಯ ಆ ಕಾಲರ್​ ಟ್ಯೂನ್​ ಅನ್ನು ತೆಗೆಯುವಂತೆ ದೆಹಲಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ (PIL) ಸಲ್ಲಿಸಲಾಗಿದೆ. ರಾಕೇಶ್ ಎಂಬುವವರು ಈ ಅರ್ಜಿಯನ್ನ ಸಲ್ಲಿಸಿದ್ದಾರೆ. ಇದರಲ್ಲಿ, ‘ಅಮಿತಾಬ್ ಬಚ್ಚನ್​ ಅವರು ಈ ಸೇವೆಗೆ ದುಡ್ಡು ತಗೋತಾರೆ. ಕೇಂದ್ರ ಸರ್ಕಾರ ಅವರಿಗೆ ದುಡ್ಡು ಕೊಡ್ತಿದೆ. ಹೀಗಾಗಿ ಅಮಿತಾಬ್ ಬಚ್ಚನ್​ ಈ ಸೇವೆಗೆ ಅರ್ಹರಲ್ಲ. ದೇಶದಲ್ಲಿ ಕೆಲ ಕೊರೋನಾ ವಾರಿಯರ್ಸ್​ ಬಡವರು ಮತ್ತು ಅಗತ್ಯ ಇರೋರಿಗೆ ಸಹಾಯ ಮಾಡ್ತಿದ್ದಾರೆ. ಕೆಲ ಕೊರೋನಾ ವಾರಿಯರ್ಸ್​ ತಾವು ಕಷ್ಟಪಟ್ಟು ದುಡಿದ ಹಣವನ್ನ ಕೊಡ್ತಿದ್ದಾರೆ. ಇನ್ನೂ ಕೆಲ ಕೊರೋನಾ ವಾರಿಯರ್ಸ್​ ಯಾವುದೇ ಹಣ ಪಡೆಯದೇ ಸೇವೆ ಸಲ್ಲಿಸಲು ರೆಡಿ ಇದ್ದಾರೆ’ ಅಂತ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಅಮಿತಾಬ್​ ಬಚ್ಚನ್ ಅವರ ಇತಿಹಾಸ ಸರಿ ಇಲ್ಲ. ಅವರು ಸಾಮಾಜಿಕ ಕಾರ್ಯಕರ್ತರಾಗಿ ದೇಶಕ್ಕೆ ಸೇವೆ ಸಲ್ಲಿಸಿಲ್ಲ ಅಂತಾನೂ ಹೇಳಲಾಗಿದೆ. ಈ ಅರ್ಜಿಯ ವಿಚಾರಣೆ ಜನವರಿ 18ನೇ ತಾರೀಖು ನಡೆಯಲಿದೆ.

-masthmagaa.com

Contact Us for Advertisement

Leave a Reply