ಪೈಲಟ್​​ಗೆ ಲಸಿಕೆ ಹಾಕಿದ್ರೆ 48 ಗಂಟೆ ತನಕ ವಿಮಾನ ಹಾರಿಸಬಾರದು!

masthmagaa.com:

ವಿಮಾನದ ಪೈಲಟ್​ ಮತ್ತು ಕ್ಯಾಬಿನ್ ಕ್ರೂ ಸದಸ್ಯರು ಕೊರೋನಾ ಲಸಿಕೆ ಹಾಕಿಸಿಕೊಂಡ ನಂತರದ 48 ಗಂಟೆ ಕಾಲ ವಿಮಾನ ಹಾರಾಟ ನಡೆಸಬಾರದು ಅಂತ ನಾಗರಿಕ ವಿಮಾನ ನಿರ್ದೇಶನಾಲಯ (DGCA) ಮಾರ್ಗಸೂಚಿ ಹೊರಡಿಸಿದೆ. ಲಸಿಕೆ ಹಾಕಿಸಿಕೊಂಡ 48 ಗಂಟೆ ಕಾಲ ಪೈಲಟ್​ ಮತ್ತು ವಿಮಾನ ಸಿಬ್ಬಂದಿ ಮೆಡಿಕಲ್ ಅನ್​ಫಿಟ್​ ಆಗಿರ್ತಾರೆ. 48 ಗಂಟೆ ಬಳಿಕ ಯಾವುದೇ ಅಡ್ಡಪರಿಣಾಮ ಇಲ್ಲದಿದ್ರೆ ವಿಮಾನವನ್ನ ಹಾರಾಟ ನಡೆಸಬಹುದು ಅಂತ ಡಿಜಿಸಿಎ ಹೇಳಿದೆ. ದೇಶದಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗ್ತಿದೆ. ಈ ಗುಂಪಿನಲ್ಲಿ ಕೆಲವೊಂದು ಪೈಲಟ್​ ಅಥವಾ ವಿಮಾನ ಸಿಬ್ಬಂದಿ ಬರಬಹುದು.

-masthmagaa.com

Contact Us for Advertisement

Leave a Reply