ಮತ್ತೊಮ್ಮೆ ಅದಾನಿ-ಹಿಂಡನ್‌ಬರ್ಗ್‌ ಸದ್ದು: ಸುಪ್ರೀಂ ಸೆಬಿಗೆ ಹೇಳಿದ್ದೇನು?

masthmagaa.com:

ಅದಾನಿ-ಹಿಂಡನ್‌ಬರ್ಗ್‌ ವಿಚಾರವಾಗಿ Securities and Exchange Board of India (Sebi) ವಿರುದ್ಧ ವ್ಯಕ್ತಿಯೊಬ್ರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದಾನಿ-ಹಿಂಡನ್‌ಬರ್ಗ್‌ ವಿಚಾರದಲ್ಲಿ ಸೆಬಿ ತನಿಖೆ ನಡೆಸೋದನ್ನ ವಿಳಂಬ ಮಾಡ್ತಿದೆ ಅಂತ ಅರ್ಜಿಯಲ್ಲಿ ಆರೋಪಿಸಲಾಗಿದೆ. ಅಂದ್ಹಾಗೆ ಹಿಂಡನ್‌ಬರ್ಗ್‌ ರಿಪೋರ್ಟ್‌ ಬಗ್ಗೆ ತನಿಖೆ ನಡೆಸಿ ಕಳೆದ ಆಗಸ್ಟ್‌ 14ರೊಳಗೆ ರಿಪೋರ್ಟ್‌ ನೀಡಿ ಅಂತ ಸೆಬಿಗೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಆದ್ರೆ ಸೆಬಿ ಈ ಅವಧಿಯಲ್ಲಿ ರಿಪೋರ್ಟ್‌ ನೀಡೋಕೆ ಫೇಲ್‌ ಆಗಿದೆ ಅಂತ ಅರ್ಜಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಮಾರಿಷಸ್‌ ಮೂಲದ ಸಂಸ್ಥೆ ಮೂಲಕ ಅದಾನಿ ಸಮೂಹ ಅಕ್ರಮವಾಗಿ ತನ್ನದೇ ಕಂಪನಿಯ ಸ್ಟಾಕ್‌ಗಳ ಮೇಲೆ ಹೂಡಿಕೆ ಮಾಡಿರೋದರ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿ ಅಂತ ಕೋರಲಾಗಿದೆ. ಅಂದ್ಹಾಗೆ ಅಮೆರಿಕ ಮೂಲದ ಹಿಂಡನ್‌ಬರ್ಗ್‌ ರಿಸರ್ಚ್‌ ಅನ್ನೊ ಸಂಸ್ಥೆ ಅದಾನಿ ಗ್ರೂಪ್ ಅಪರಾಧ ಮಾಡಿ ಅಕ್ರಮ ಎಸಗಿದೆ ಅಂತ ರಿಪೋರ್ಟ್‌ ನೀಡಿತ್ತು.

-masthmagaa.com

Contact Us for Advertisement

Leave a Reply