ಮೋದಿ ಭೇಟಿಯಾದ ಅಮಿತ್ ಶಾ.. ಲಾಕ್​ಡೌನ್​-5 ಘೋಷಣೆ ಸಾಧ್ಯತೆ

masthmagaa.com:

ಕೊರೋನಾ ಹಾವಳಿ ನಿಯಂತ್ರಣಕ್ಕೆ ತರಲು ಹೇರಿದ್ದ 4ನೇ ಹಂತದ ಲಾಕ್​ಡೌನ್ ಅಂತ್ಯಗೊಳ್ಳಲು​ ಇನ್ನೆರಡು ದಿನ ಬಾಕಿ ಇದೆ. ಹೀಗಾಗಿ ಜೂನ್​ 1ರಿಂದ ಲಾಕ್​ಡೌನ್ ಇರುತ್ತಾ..? ಇಲ್ವಾ..? ಇದ್ರೆ ಹೇಗಿರುತ್ತೆ..? ಲಾಕ್​ಡೌನ್​ ಸಡಿಲವಾಗುತ್ತಾ ಅಥವಾ ಕಾಯಿಲೆ ಹಾವಳಿ ಜಾಸ್ತಿಯಾಗ್ತಿರೋದ್ರಿಂದ ಮತ್ತಷ್ಟು ಬಿಗಿಯಾಗುತ್ತಾ..? ಅನ್ನೋ ಹತ್ತು ಹಲವು ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿಯಾಗಿದ್ದಾರೆ. ಈ ವೇಳೆ ಲಾಕ್​ಡೌನ್​ ಕುರಿತು ಮಹತ್ವದ ಮಾತುಕತೆ ನಡೆಯಲಿದೆ ಎನ್ನಲಾಗಿದೆ.

ನಿನ್ನೆಯಷ್ಟೇ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದ ಅಮಿತ್ ಶಾ ಲಾಕ್​ಡೌನ್ ಕುರಿತು ಸಲಹೆ ನೀಡುವಂತೆ ಕೇಳಿದ್ರು. ಇದರ ಬೆನ್ನಲ್ಲೇ ಇಂದು ಪ್ರಧಾನಿ ಭೇಟಿಯಾಗುತ್ತಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ಒಂದೆರಡು ದಿನಗಳಲ್ಲಿ ಲಾಕ್​ಡೌನ್​ ವಿಸ್ತರಿಸುವ ಕುರಿತು ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಧಾರ್ಮಿಕ ಕೇಂದ್ರಗಳು, ಹೋಟೆಲ್​, ರೆಸ್ಟೋರೆಂಟ್​​ಗಳನ್ನ ತೆರೆಯಲು ಅವಕಾಶ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಲಾಕ್​ಡೌನ್ ಮತ್ತೆ 15 ದಿನ ವಿಸ್ತರಣೆಯಾಗಬೇಕು ಅಂತ ಗೋವಾ ಸಿಎಂ ಪ್ರಮೋದ್ ಸಾವಂತ್ ಆಗ್ರಹಿಸಿದ್ದಾರೆ. ಈ ಬಗ್ಗೆ ಅಮಿತ್ ಶಾ ಜೊತೆ ಫೋನ್ ಮೂಲಕ ಮಾತನಾಡಿರೋ ಅವರು, ಗೋವಾದಲ್ಲಿ ಸೋಂಕು ಹೆಚ್ಚಾಗುತ್ತಿರೋದ್ರಿಂದ ಲಾಕ್​ಡೌನ್ ವಿಸ್ತರಿಸಿ. ಆದ್ರೆ ಹೋಟೆಲ್, ರೆಸ್ಟೋರೆಂಟ್​ಗಳನ್ನ ತೆರೆಯಲು ವಿನಾಯಿತಿ ನೀಡಿ ಅಂತ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply