ಹೊಸ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇ-ರುಪೀಗೆ ಪ್ರಧಾನಿ ಮೋದಿ ಚಾಲನೆ!

masthmagaa.com:

ಇ-ರುಪಿ ಅನ್ನೋ ಹೊಸ ಡಿಜಿಟಲ್​​ ಪೇಮೆಂಟ್​ ವ್ಯವಸ್ಥೆಯನ್ನ ಪ್ರಧಾನಿ ಮೋದಿ ಇವತ್ತು ವಿಡಿಯೋ ಕಾನ್ಫರೆನ್ಸಿಂಗ್​ ಮೂಲಕ ಲಾಂಚ್ ಮಾಡಿದ್ದಾರೆ. ಇ-ರುಪಿ ಅನ್ನೋದು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೀಡುವ ಎಲೆಕ್ಟ್ರಾನಿಕ್ ಪ್ರಿ-ಪೇಯ್ಡ್​ ವೋಚರ್ ಅಥವಾ ಕೂಪನ್​​. ಫಲಾನುಭವಿಗಳ ಬ್ಯಾಂಕ್​ ಅಕೌಂಟ್​​ಗೆ ಹಣವನ್ನ ಹಾಕೋದ್ರ ಬದಲು ಅವರ ಮೊಬೈಲ್​ ಸಂಖ್ಯೆಗೆ ಈ ವೋಚರ್ ಅನ್ನ ಕಳಿಸಲಾಗುತ್ತೆ. ಇದು ಕ್ಯೂಆರ್​ ಕೋಡ್ ಅಥವಾ ಎಸ್​ಎಂಎಸ್​ ರೂಪದಲ್ಲಿರುತ್ತೆ. ಇದರ ದೊಡ್ಡ ಲಾಭ ಅಂದ್ರೆ ಈ ವೋಚರ್ ಅನ್ನ ರೆಡೀಮ್ ಮಾಡಿಕೊಳ್ಳಲು ಆನ್​ಲೈನ್​ ಬ್ಯಾಂಕಿಂಗ್ ಅಥವಾ ಇಂಟರ್​ನೆಟ್ ಬ್ಯಾಂಕಿಂಗ್​​​​ ಆಗಲೀ, ಪೇಮೆಂಟ್ ಆ್ಯಪ್ಸ್​ ಆಗಲೀ, ಕಾರ್ಡ್ ಆಗಲೀ ಬೇಕಾಗಿಲ್ಲ. ಬೇಸಿಕ್ ಸೆಟ್​ ಅಥವಾ ಮೊಬೈಲ್ ಇದ್ದವರಿಗೂ ಈ ವೋಚರ್ ಅನ್ನ ಕಳಿಸಬಹುದು. ಈ ಕ್ಯೂಆರ್ ಕೋಡ್ ಅಥವಾ ಎಸ್​ಎಂಎಸ್​ ಅನ್ನ ತೋರಿಸಿ ಫಲಾನುಭವಿಗಳು ಬ್ಯಾಂಕ್​ ಅಕೌಂಟ್​ ಇಲ್ಲದಿದ್ದರೂ ಈಸಿಯಾಗಿ ಆರೋಗ್ಯ ಸೇವೆ, ಮಕ್ಕಳ ಕಲ್ಯಾಣ, ಔಷಧ, ರಸಗೊಬ್ಬರದ ಸಬ್ಸೀಡಿಗಳನ್ನ ಪಡೆಯಬಹುದು. ಈ ಇ-ರುಪಿ ವ್ಯವಸ್ಥೆ ಕ್ರಾಂತಿಯನ್ನೇ ಮಾಡುತ್ತೆ ಅಂತ ಪಿಎಂಒ ಹೇಳಿದೆ.

-masthmagaa.com

Contact Us for Advertisement

Leave a Reply