ಭಾರತ,ಯುಕ್ರೇನ್‌ಗೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಬೇಕು: ಯುಕ್ರೇನ್‌ ಅಧ್ಯಕ್ಷ

masthmagaa.com:

ರಷ್ಯಾ ಮತ್ತು ಉಕ್ರೇನ್ ನಡುವೆ ಮಧ್ಯಸ್ಥಿಕೆ ವಹಿಸೋಕೆ ಭಾರತದ ಪ್ರಧಾನಿ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆಯ ಜನರಲ್‌ ಸೆಕ್ರೆಟ್ರಿ ಆಂಟೋನಿಯೊ ಗುಟೆರಸ್ ಮೂವರನ್ನ ಒಳಗೊಂಡ ಸಮಿತಿ ರಚಿಸುವಂತೆ ಮೆಕ್ಸಿಕೋ ದೇಶ ವಿಶ್ವಸಂಸ್ಥೆಗೆ ಆಗ್ರಹ ಮಾಡಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಸಭೆಯ ಯುಕ್ರೇನ್‌ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮೆಕ್ಸಿಕೋದ ವಿದೇಶಾಂಗ ಸಚಿವ ಮಾರ್ಸೆಲೊ ಲೂಯಿಸ್ ಎಬ್ರಾಡ್ ಕ್ಯಾಸೌಬಾನ್ ಈ ಪ್ರಸ್ತಾಪ ಮುಂದಿಟ್ಟಿದ್ದಾರೆ. ಅಂದ್ಹಾಗೆ ಈ ಮುಂಚೆ ಕೂಡ ಇದೇ ಮೆಕ್ಸಿಕೋದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಕೂಡ ಈ ಮೂವರನ್ನ ಒಳಗೊಂಡ ಸಮಿತಿ ರಚಿಸುವಂತೆ ಆಗ್ರಹ ಮಾಡಿದ್ರು. ಇನ್ನು ಇದೇ ಸಭೆಯಲ್ಲಿ ಮೊದಲೇ ರೆಕಾರ್ಡ್‌ ಮಾಡಿದ ವಿಡಿಯೋದಲ್ಲಿ ಮಾತನಾಡಿದ್ದ ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿಕೂಡ ಭಾರತ, ಜಪಾನ್‌, ಜರ್ಮನಿ ಹಾಗೂ ಯುಕ್ರೇನ್‌ಗಳಿಗೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಕೊಡ್ಬೇಕು ಅಂತ ಹೇಳಿದ್ರು. ಅತ್ತ ಇನ್ನುವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯಲ್ಲಿ ಮಾತನಾಡಿದ ಪೋರ್ಚುಗಲ್‌ ಪ್ರಧಾನಿ ಅಂಟನಿಯೋ ಕೋಸ್ಟ ಭಾರತ, ಜರ್ಮನಿ, ಹಾಗೂ ಜಪಾನ್‌ ದೇಶಗಳಿಗೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಕೊಡ್ಬೇಕು ಅಂತ ಇವರೂ ಆಗ್ರಹ ಮಾಡಿದ್ದಾರೆ. ಅಂದ್ಹಾಗೆ ಈಗ ವಿಶ್ವಸಂಸ್ಥೆಯ ಮುಖ್ಯಸ್ಥರಾಗಿರೋ ಅಂಟನಿಯೋ ಗುಟ್ರೆಸ್‌ ಕೂಡ ಇದೇ ಪೋರ್ಚುಗಲ್‌ ದೇಶದವರು.

-masthmagaa.com

Contact Us for Advertisement

Leave a Reply