ಬಜರಂಗ ಯುದ್ಧ, BJP ಬಜರಂಗ ಬಲಿ! ಕಾಂಗ್ರೆಸ್ ಗಲಿಬಿಲಿ!

masthmagaa.com:

ಅಧಿಕಾರಕ್ಕೆ ಬಂದ್ರೆ ಬಜರಂಗದಳ ನಿಷೇಧ ಮಾಡುವ ಭರವಸೆಯನ್ನ ಕಾಂಗ್ರೆಸ್‌ ನೀಡಿದ್ದು, ಚುನಾವಣೆ ಟೈಮಲ್ಲಿ ಬಿಜೆಪಿಗೆ ಅತಿದೊಡ್ಡ ಅಸ್ತ್ರ ಕೊಟ್ಟಂತಾಗಿದೆ. ಬಿಜೆಪಿ ಈ ವಿಷಯವನ್ನ ಚುನಾವಣಾ ಪ್ರಚಾರಗಳಲ್ಲಿ ಜೋರಾಗಿ ಬಳಸಿಕೊಳ್ತಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಜೈ ಬಜರಂಗಬಲಿ ಅಂತ ಕೂಗುವ ಮೂಲಕವೇ ಪ್ರಧಾನಿ ಮೋದಿ ತಮ್ಮ ಭಾಷಣವನ್ನ ಆರಂಭಿಸಿದ್ದಾರೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಕಾರ್ಯಕ್ರಮದಲ್ಲಿ ಮಾತಾಡಿದ ಮೋದಿ, ಮತದಾನದ ದಿನ ಜೈ ಬಜರಂಗಬಲಿ ಅಂತ ಕಮಲದ ಬಟನ್‌ ಒತ್ತುವ ಮೂಲಕ ಕಾಂಗ್ರೆಸ್‌ ಪಕ್ಷವನ್ನ ಶಿಕ್ಷಿಸಿ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಕಾಂಗ್ರೆಸ್‌ ವಿರುದ್ಧ ಬಜರಂಗದಳ ಹಾಗೂ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕೋದನ್ನ ಮುಂದುವರೆಸಿವೆ. ಗುರುವಾರ ಅಂದ್ರೆ ನಾಳೆ ಏಕಕಾಲಕ್ಕೆ ರಾಜ್ಯಾದ್ಯಂತ ದೇವಾಲಯಗಳಲ್ಲಿ ಹನುಮಾನ್‌ ಚಾಲೀಸಾ ಪಠಿಸಲು ಬಜರಂಗದಳ ನಿರ್ಧರಿಸಿದೆ. ಸಂಜೆ 7 ಗಂಟೆಗೆ ಹನುಮಾನ್‌ ಚಾಲೀಸಾ ಪಠಣ ಮಾಡೋಕೆ ಸಿದ್ಧತೆ ನಡೆಸುತ್ತಿವೆ. ಇತ್ತ ಹೈದರಾಬಾದ್‌ನ ಕಾಂಗ್ರೆಸ್‌ ಕಚೇರಿ ಮುಂದೆ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಬಜರಂಗದಳ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ. ಇಷ್ಟಲ್ಲಾ ವಿವಾದಗಳ ಮಧ್ಯೆ ಬಜರಂಗದಳ ನಿಷೇಧ ಕುರಿತು ಮಾತಾಡಿರೊ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಹೇಳಿದ್ದಾರೆ. ನಾವೂ ಆಂಜನೇಯ ಭಕ್ತರು. ಅವರು ಮಾತ್ರಾನಾ? ಶಾಂತಿ ತೋಟ ಕದಲಬಾರ್ದು. ಬಜರಂಗದಳ ಬ್ಯಾನ್‌ ಮಾಡ್ತೀವಿ ಅಂದ್ರೆ ಅವ್ರ ಯಾಕೆ ಗಾಬರಿ ಆಗ್ತಿದ್ದಾರೆ. ಆಂಜನೇಯನಿಗೂ ಬಜರಂಗದಳಕ್ಕೂ ಏನ್‌ ಸಂಬಂಧ. ಜನ್ರನ್ನ ಬಿಜೆಪಿ ಅವ್ರು ಪ್ರವೋಕ್‌ ಮಾಡ್ತಿದಾರೆ ಅಂತ ಹೇಳಿದಾರೆ. ಇನ್ನೊಂದ್‌ ಕಡೆ ಕಾಂಗ್ರೆಸ್‌ ಆಡಳಿತವಿರುವ ಛತ್ತೀಸಗಢದಲ್ಲಿ, ಅಗತ್ಯಬಿದ್ರೆ ಬಜರಂಗದಳವನ್ನ ಬ್ಯಾನ್‌ ಮಾಡೋ ಬಗ್ಗೆ ಯೋಚಿಸಲಾಗುತ್ತೆ ಅಂತ ಅಲ್ಲಿನ ಸಿಎಂ ಭೂಪೇಶ್‌ ಬಗೇಲ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply