ನಾನು ಕಲೈನಾರ್ ಮಗ, ತುರ್ತುಪರಿಸ್ಥಿತಿ ನೋಡಿದ್ದೀನಿ, ನನ್ನನ್ನ ಹೆದರಿಸೋಕೆ ಬರ್ಬೇಡಿ

masthmagaa.com:

ತಮಿಳುನಾಡಿನಲ್ಲಿ ಏಪ್ರಿಲ್ 6ನೇ ತಾರೀಖು ಮತದಾನ ನಡೆಯಲಿದೆ. ಇದರ ನಡುವೆನೇ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಮಗಳ ಗಂಡ ಮತ್ತು ಕೆಲ ಡಿಎಂಕೆ ನಾಯಕರ ಮನೆ, ಕಚೇರಿಗಳ ಮೇಲೆ ಇವತ್ತು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ಬಿಜೆಪಿ ಮತ್ತು ಮೋದಿ ನಡೆಸಿರೋ ರೇಡ್ ಅಂತ ಹೇಳಿರೋ ಸ್ಟಾಲಿನ್, ನಾನು ಕಲೈನಾರ್ ಮಗ. ಇದಕ್ಕೆಲ್ಲಾ ಹೆದರಲ್ಲ. ನಾನು 1975ರ ತುರ್ತುಪರಿಸ್ಥಿತಿ, MISA ಕಾನೂನನ್ನೆಲ್ಲಾ ನೋಡಿದ್ದೀನಿ ಎಂದಿದ್ದಾರೆ. ಇದ್ರಲ್ಲಿ MISA ಅಂದ್ರೆ ಏನು..? Maintenance of Internal Security Act. ಬಿಹಾರದ ಲಾಲೂ ಪ್ರಸಾದ್​ ಯಾದವ್​ ಇದನ್ನೇ ತಮ್ಮ ಮಗಳಿಗೆ ಹೆಸರನ್ನಾಗಿ ಇಟ್ಟಿದ್ದಾರೆ. ಮೀಸಾ ಭಾರತಿ ಅಂತ. ಲಾಲೂರನ್ನ ತುರ್ತು ಪರಿಸ್ಥಿತಿ ವೇಳೆ ಇದೇ ಕಾನೂನಿನ ಅಡಿ ಜೈಲಿಗೆ ಹಾಕಲಾಗಿತ್ತಂತೆ. ಹೀಗಾಗಿ ಅದರ ನೆನಪಿಗಾಗಿ ಲಾಲೂ ತಮ್ಮ ಮಗಳಿಗೆ ಆ ಕಾನೂನಿನ ಹೆಸರನ್ನೇ ಇಟ್ಟಿದ್ದೀನಿ ಅಂತ ಈ ಹಿಂದೆ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply