ವಾರಣಾಸಿ-ದೆಹಲಿ: ಹೊಸ 2ನೇ ʻವಂದೇ ಭಾರತ್‌ ಎಕ್ಸ್‌ಪ್ರೆಸ್‌ʼ ಎಂಟ್ರಿ!

masthmagaa.com:

ನೂತನವಾಗಿ ಎರಡನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಇದೀಗ ವಾರಣಾಸಿ ಮತ್ತು ದೆಹಲಿ ಮಧ್ಯೆ ತನ್ನ ಪ್ರಯಾಣ ಶುರು ಮಾಡೋಕೆ ರೆಡಿಯಾಗಿದೆ. ಈ ಹೊಸ ಟ್ರೈನಿಗೆ ಪ್ರಧಾನಿ ಮೋದಿಯವ್ರು ಡಿಸೆಂಬರ್‌ 18 ರಂದು ಅಫಿಶಿಯಲ್‌ ಆಗಿ ಚಾಲನೆ ನೀಡಲಿದ್ದಾರೆ. ಇನ್ನು ನೂತನವಾಗಿ ಲಾಂಚ್‌ ಆಗಲಿರೋ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮತ್ತು ಹಿಂದಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮಧ್ಯೆ ಒಂದು ಪ್ರಮುಖವಾದ ವ್ಯತ್ಯಾಸವಿದೆ. ಅದೇನಂದ್ರೆ, ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ಹೊಸ ರೈಲು ತನ್ನ ಬೆಳಗ್ಗಿನ ಟ್ರಿಪ್‌ನ್ನ ದೆಹಲಿಯಿಂದ ಸ್ಟಾರ್ಟ್‌ ಮಾಡೋ ಬದಲು ವಾರಣಾಸಿಯಿಂದ ಸ್ಟರ್ಟ್‌ ಮಾಡುತ್ತೆ. ಇನ್ನು ಈ ಹೊಸ ಟ್ರೈನ್‌ನ ಟೈಮಿಂಗ್ಸ್‌ ಬಗ್ಗೆ ಗಮನಿಸೋದಾದ್ರೆ, ಬೆಳಗ್ಗೆ 6 ಗಂಟೆಗೆ ವಾರಣಾಸಿಯಿಂದ ತನ್ನ ಪ್ರಯಾಣ ಶುರು ಮಾಡ್ಕೊಳುತ್ತೆ. ದೆಹಲಿಗೆ ರೀಚ್‌ ಆಗೋವಾಗ ಮಧ್ಯಾಹ್ನ 02:05 ಆಗಿರುತ್ತೆ. ಈ ಜರ್ನಿ ಮಧ್ಯೆ ಪ್ರಯಾಗ್ರಾಜ್‌ ಮತ್ತು ಕಾನ್ಪುರದಲ್ಲಿ ಸ್ಟಾಪ್‌ ನೀಡುತ್ತೆ. ಇನ್ನು ವಾಪಾಸ್‌ ಆಗೋ ವೇಳೆ ಮಧ್ಯಾಹ್ನ 3 ಗಂಟೆಗೆ ದೆಹಲಿಯಿಂದ ಹೊರಟು, ರಾತ್ರಿ 11:05ಕ್ಕೆ ವಾರಣಾಸಿ ರೀಚ್‌ ಆಗುತ್ತೆ. ಅಂದ್ಹಾಗೆ ಇದೇ ರೂಟ್‌ನ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ತನ್ನ ಸರ್ವೀಸ್‌ನ್ನ 2019 ರಲ್ಲಿ ಸ್ಟಾರ್ಟ್‌ ಮಾಡಿತ್ತು.

-masthmagaa.com

Contact Us for Advertisement

Leave a Reply