VIDEO: ರಾಜ್ಯಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ.. ಕಂಪ್ಲೀಟ್​ ಸ್ಟೋರಿ

masthmagaa.com:

ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಇವತ್ತು ಕಣ್ಣೀರು ಹಾಕಿದ್ದಾರೆ. ಗುಲಾಂ ನಬಿ ಆಜಾದ್ ಅವರನ್ನ ಶ್ಲಾಘಿಸುವಾಗ ಹಿಂದೆ ನಡೆದ ಘಟನೆಯೊಂದನ್ನ ನೆನೆದು ಮೋದಿ ಕಣ್ಣಲ್ಲಿ ನೀರು ಬಂತು. ಅದು ಮೋದಿ ಗುಜರಾತ್ ಸಿಎಂ ಆಗಿದ್ದಾಗ ಮತ್ತು ಗುಲಾಂ ನಬಿ ಆಜಾದ್ ಜಮ್ಮು-ಕಾಶ್ಮೀರ ಸಿಎಂ ಆಗಿದ್ದಾಗ ನಡೆದ ಘಟನೆ. ‘ಒಂದ್ಸಲ ಗುಜರಾತ್​ನಿಂದ ಜಮ್ಮು-ಕಾಶ್ಮೀರಕ್ಕೆ ಹೋಗಿದ್ದ ಪ್ರಯಾಣಿಕರ ಮೇಲೆ ಉಗ್ರರು ದಾಳಿ ನಡೆಸಿದ್ರು. ಅದರಲ್ಲಿ ಸಾಕಷ್ಟು ಜನ ಪ್ರಾಣ ಕಳೆದುಕೊಂಡ್ರು. ಆಗ ಗುಲಾಂ ನಬಿ ಆಜಾದ್​ರಿಂದ ನಂಗೆ ಕಾಲ್ ಬಂತು. ಅದು ಕೇವಲ ಸೂಚನೆ ನೀಡುವ ಕಾಲ್ ಆಗಿರ್ಲಿಲ್ಲ (ಮೊದಲ ಬಾರಿ ಮೋದಿ ಭಾವುಕರಾದ್ರು). ಗುಲಾಂ ನಬಿ ಆಜಾದ್​ ಅವರ ಕಣ್ಣೀರು ನಿಲ್ಲುತ್ತಿರಲಿಲ್ಲ. ಆಗ ಪ್ರಣಬ್ ಮುಖರ್ಜಿ ರಕ್ಷಣಾ ಸಚಿವರಾಗಿದ್ರು. ಆಗ ನಾನು ಪ್ರಣಬ್ ಮುಖರ್ಜಿಗೆ ಕಾಲ್ ಮಾಡಿ, ಮೃತದೇಹಗಳನ್ನ ತರಲು ಸೇನಾ ವಿಮಾನ ಸಿಗುತ್ತಾ ಅಂತ ಕೇಳ್ದೆ. ಪ್ರಣಬ್ ಮುಖರ್ಜಿ, ನೀವ್ ಟೆನ್ಷನ್ ಮಾಡ್ಬೇಡಿ. ನಾನು ಅದರ ವ್ಯವಸ್ಥೆ ಮಾಡ್ತೀನಿ ಅಂದ್ರು. ಆದ್ರೆ ರಾತ್ರಿ ಗುಲಾಂ ನಬಿ ಆಜಾದ್​ರಿಂದ ಮತ್ತೆ ಕಾಲ್ ಬಂತು. ಅವರು ಏರ್​ಪೋರ್ಟ್​ನಲ್ಲಿದ್ರು. ಏರ್​ಪೋರ್ಟ್​ನಿಂದಲೇ ಕಾಲ್​ ಮಾಡಿದ್ರು (ಎರಡನೇ ಸಲ ಭಾವುಕರಾದ್ರು). ಗುಜರಾತ್​ನ ಪ್ರಯಾಣಿಕರನ್ನ ತಮ್ಮ ಕುಟುಂಬ ಸದಸ್ಯರಂತೆ ನೋಡಿದ್ರು. ಅಂತಹ ಮನುಷ್ಯ.. (ಗುಲಾಂಬಿ ನಬಿ ಆಜಾದ್ ಕಡೆ ಬೊಟ್ಟು ಮಾಡಿ ಮತ್ತೆ ಭಾವುಕರಾದ್ರು). ಅಧಿಕಾರ, ಹುದ್ದೆಗಳು ಜೀವನದಲ್ಲಿ ಬಂದು ಹೋಗ್ತಾ ಇರುತ್ತೆ. ಆದ್ರೆ ಜೀವನದಲ್ಲಿ ಅದನ್ನ ಹೇಗೆ ಜೀರ್ಣಿಸಿಕೊಳ್ಳಬೇಕು ಅನ್ನೋದು ಇವರಿಗೆ ಗೊತ್ತು (ಗುಲಾಂ ನಬಿ ಆಜಾದ್​ಗೆ ಸಲ್ಯೂಟ್​ ಮಾಡಿದ ಮೋದಿ). ನನ್ನ ಪಾಲಿಗೆ ಅದು ತುಂಬಾ ಭಾವುಕ ಕ್ಷಣವಾಗಿತ್ತು (ಮತ್ತೆ ಕಣ್ಣೀರಿಟ್ಟ ಪ್ರಧಾನಿ ಮೋದಿ ಕಣ್ಣೀರನ್ನ ಒರೆಸಿಕೊಳ್ಳುತ್ತಾ). ಮರುದಿನ ಮತ್ತೆ ನಂಗೆ ಕಾಲ್ ಮಾಡಿದ ಗುಲಾಂ ನಬಿ ಆಜಾದ್, ಮೋದಿಜಿ ಎಲ್ಲರೂ ಬಂದ್ರಾ ಅಂತ ಕೇಳಿದ್ರು. ಹೀಗಾಗಿ ಒಬ್ಬ ಮಿತ್ರನ ರೂಪದಲ್ಲಿ ಗುಲಾಂ ನಬಿ ಆಜಾದ್​ ಅವರನ್ನ ಘಟನೆ ಮತ್ತು ಅನುಭವದ ಆಧಾರದಲ್ಲಿ ನಾನು ಗೌರವಿಸುತ್ತೇನೆ (ಮತ್ತೆ ಕಣ್ಣೀರು ಒರೆಸಿಕೊಂಡ ಮೋದಿ). ನೀವು ಯಾವತ್ತೂ ಕೂಡ ಈ ಸದನದಲ್ಲಿ ಇಲ್ಲ ಅಂದುಕೊಳ್ಳಬೇಡಿ. ನಿಮಗಾಗಿ ನನ್ನ ಬಾಗಿಲು ಯಾವತ್ತೂ ತೆರೆದಿರುತ್ತೆ. ನಿಮ್ಮ ವಿಚಾರ ಮತ್ತು ಸಲಹೆಗಳು ಈ ದೇಶಕ್ಕೆ ಬೇಕಾಗಿದೆ. ನಿಮ್ಮ ಅನುಭವ ದೇಶಕ್ಕೆ ತುಂಬಾ ಬೇಕಾಗುತ್ತೆ. ನನಗೆ ಇದು ಸಿಗ್ತಾ ಇರುತ್ತೆ ಅಂತ ಅಪೇಕ್ಷಿಸುತ್ತಿರುತ್ತೇನೆ. ನೀವು ನಿವೃತ್ತಿ ಹೊಂದಲು ನಾನು ಬಿಡೋದಿಲ್ಲ. ನಿಮಗೆ ಮತ್ತೊಮ್ಮೆ ಶುಭಾಶಯ.. ಧನ್ಯವಾದಗಳು’ ಅಂತ ಪ್ರಧಾನಿ ಮೋದಿ ಹೇಳಿದ್ರು. ಅಂದ್ಹಾಗೆ ರಾಜ್ಯಸಭೆ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್​ ಲೀಡರ್ ಗುಲಾಂ ನಬಿ ಆಜಾದ್ ಅವರ ವಿದಾಯದ ವೇಳೆ ಪ್ರಧಾನಿ ಮೋದಿ ಭಾವುಕವಾದ ಕ್ಷಣವಿದು.

-masthmagaa.com

Contact Us for Advertisement

Leave a Reply