ಒಂದೇ ದಿನ 9 ಮೆಡಿಕಲ್ ಕಾಲೇಜು ಉದ್ಘಾಟಿಸಿದ ಪ್ರಧಾನಿ ಮೋದಿ!

masthmagaa.com:

ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಒಂದೇ ದಿನ 9 ಮೆಡಿಕಲ್ ಕಾಲೇಜುಗಳನ್ನ ಉದ್ಘಾಟನೆ ಮಾಡಿದ್ದಾರೆ. ಇವುಗಳನ್ನ 2329 ಕೋಟಿ ವೆಚ್ಚದಲ್ಲಿ ಸಿದ್ದಾರ್ಥನಗರ, ಇಟಾ, ಹರ್ದೋಯ್, ಪ್ರತಾಪಗಢ, ಫತೇಪುರ, ದಿಯೋರಿಯಾ, ಮಿರ್ಜಾಪುರ ಹಾಗೂ ಜಾವುನ್ಪುರಗಳಲ್ಲಿ ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಇಡೀ ದೇಶದಲ್ಲಿ, ವಿಶೇಷವಾಗಿ ಉತ್ತರ ಪ್ರದೇಶದ ಪೂರ್ವಾಂಚಲದಲ್ಲಿ ಆರೋಗ್ಯ ಕ್ಷೇತ್ರವನ್ನ ಸಂಪೂರ್ಣ ಕಡೆಗಣಿಸಲಾಗಿತ್ತು. ಆದ್ರೆ ಇನ್ನು ಮುಂದೆ ಈ ಪ್ರದೇಶ ಆರೋಗ್ಯ ಕ್ಷೇತ್ರದ ಸಾಧನೆಗೆ ಹೆಸರು ಮಾಡಲಿದೆ. ಹೆಚ್ಚೆಚ್ಚು ಮೆಡಿಕಲ್ ಕಾಲೇಜು ಓಪನ್ ಆದಂತೆ ಹೆಚ್ಚೆಚ್ಚು ಸೀಟುಗಳು ಕೂಡ ಲಭ್ಯ ಆಗುತ್ತವೆ. ಬಡವರ ಮಕ್ಕಳು ಕೂಡ ವೈದ್ಯರಾಗೋ ಕನಸು ಕಾಣೋಕೆ ಸಾಧ್ಯ ಆಗುತ್ತೆ. ಕಳೆದ 7೦ ವರ್ಷಗಳಲ್ಲಿ ಎಷ್ಟು ವೈದ್ಯರು ಈ ದೇಶದಲ್ಲಿ ಸೃಷ್ಟಿಯಾಗಿದ್ದಾರೋ, ಅದಕ್ಕಿಂತ ಹೆಚ್ಚಿನ ವೈದ್ಯರನ್ನ ಮುಂದಿನ 10 ವರ್ಷಗಳಲ್ಲೇ ಸೃಷ್ಟಿ ಮಾಡುತ್ತೇವೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರೋ ಕಾಂಗ್ರೆಸ್, ಇದು ಚುನಾವಣಾ ಗಿಮಿಕ್. ಇಷ್ಟು ಆಸ್ಪತ್ರೆ ಕಟ್ಟಿ ರೆಡಿ ಇಟ್ಟುಕೊಂಡು ಈಗ ಚುನಾವಣೆ ಟೈಮಲ್ಲಿ ಓಫನ್ ಮಾಡ್ತಿದ್ದಾರೆ. ಕೊರೋನ ಟೈಮಲ್ಲೇ ಓಪನ್ ಮಾಡ್ಬೇಕಾಗಿತ್ತು. ಒಂದಷ್ಟು ಜನರ ಜೀವ ಉಳೀತಿತ್ತು ಅಂತ ಹೇಳಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತಾಡಿ, ನಾವು ಅಧಿಕಾರಕ್ಕೆ 10 ಲಕ್ಷ ರೂಪಾಯಿವರೆಗೆ ಫ್ರೀ ಟ್ರೀಟ್ಮೆಂಟ್ ಕೊಡಿಸ್ತೀವಿ ಅಂತ ಹೊಸ ಆಶ್ವಾಸನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply