ಚೀನೀ ಸೇರಿದಂತೆ 3 ಭಾಷೆಗಳಲ್ಲಿ ಟ್ವೀಟ್ ಮಾಡಿ ಮೋದಿ ಹೇಳಿದ್ದೇನು ಗೊತ್ತಾ..?

ಚೀನಾ ಪ್ರಧಾನಿ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಆದ್ರೆ ಇದಕ್ಕೂ ಮುನ್ನ ಚೆನ್ನೈಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಮೂರು ಭಾಷೆಗಳಲ್ಲಿ ಟ್ವೀಟ್ ಮಾಡಿದ್ದಾರೆ. ಮೊದಲಿಗೆ ತಮಿಳು, ನಂತರ ಇಂಗ್ಲಿಷ್ ಮತ್ತು ಚೀನೀ ಭಾಷೆಯಲ್ಲಿ ಟ್ವೀಟ್ ಮಾಡಿ, ಚೈನ್ನೈ ಬಗ್ಗೆ ಹೊಗಳಿದ್ದಾರೆ. ನಾನು ಚೆನ್ನೈ ತಲುಪಿದ್ದೇನೆ. ಆತಿಥ್ಯ ಮತ್ತು ಸಂಸ್ಕøತಿಯಿಂದ ಪ್ರಸಿದ್ಧವಾಗಿರುವ ತಮಿಳುನಾಡಿನಂತಹ ಮಹಾನ್ ಭೂಮಿಗೆ ಬಂದಿರೋದು ನನಗೆ ಸಂತೋಷ ತಂದಿದೆ. ಕ್ಸಿ ಜಿನ್ ಪಿಂಗ್ ಅವರಿಗೆ ತಮಿಳುನಾಡು ಆತಿಥ್ಯ ವಹಿಸುತ್ತಿರೋದು ಸಂತೋಷದ ವಿಚಾರವಾಗಿದೆ. ಜಿನ್ ಪಿಂಗ್ ಅವರ ಈ ಭೇಟಿ ಭಾರತ ಮತ್ತು ಪಾಕ್ ನಡುವಿನ ಸಂಬಂಧವನ್ನು ಮತ್ತಷ್ಟು ಬಲಿಷ್ಠಗೊಳಿಸುವ ವಿಶ್ವಾಸವಿದೆ ಎಂದಿದ್ದಾರೆ.

ಇನ್ನು ಚೆನ್ನೈಗೆ ಬಂದಿಳಿದ ಕ್ಸಿ ಜಿನ್ ಪಿಂಗ್ ಅವರನ್ನು ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ತಮಿಳುನಾಡು ಸಿಎಂ ಪಳನಿಸ್ವಾಮಿ, ಡಿಸಿಎಂ ಪನ್ನೀರ್ ಸೆಲ್ವಂ ಸ್ವಾಗತಿಸಿದ್ರು. ಇದೇ ವೇಳೆ ವಿವಿಧ ಕಲಾತಂಡಗಳು ಕ್ಸಿ ಜಿನ್ ಪಿಂಗ್ ಅವರಿಗೆ ಸ್ವಾಗತ ಕೋರಿದವು. ಇದರಿಂದ ಸಂತಸಗೊಂಡ ಜಿನ್ ಪಿಂಗ್ ಕೈ ತೋರಿಸಿ ವಿಶ್ ಮಾಡಿದ್ರು. ಇನ್ನು ಪ್ರಧಾನಿ ಮೋದಿ ಮಹಾಬಲಿಪುರಂನಲ್ಲಿ ಕ್ಸಿ ಜಿನ್‍ಪಿಂಗ್ ಭೇಟಿಯಾಗಲಿದ್ದಾರೆ. ಚೆನ್ನೈನಿಂದ 56 ಕಿಲೋಮೀಟರ್ ದೂರದಲ್ಲಿರುವ ಈ ನಗರ ಈಗ ಖಾಕಿ ಭದ್ರಕೋಟೆಯಾಗಿ ಮಾರ್ಪಟ್ಟಿದೆ. 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಸಮುದ್ರದಲ್ಲಿ ಯುದ್ಧ ನೌಕೆ ಗಸ್ತು ತಿರುಗುತ್ತಿದೆ.

Contact Us for Advertisement

Leave a Reply