ದೇವರನಾಡಲ್ಲಿ ಮೋದಿ: 4 ಸಾವಿರ ಕೋಟಿ ವೆಚ್ಚದ ಯೋಜನೆ ಉದ್ಘಾಟನೆ

masthmagaa.com:

ಪ್ರಧಾನಿ ಮೋದಿ ಬುಧವಾರ ಕೇರಳಾಗೆ ಭೇಟಿ ನೀಡಿದ್ದಾರೆ. ಈ ವೇಳೆ 4 ಸಾವಿರ ಕೋಟಿ ವೆಚ್ಚದ ಪ್ರಾಜೆಕ್ಟ್‌ಗಳನ್ನ ಉದ್ಘಾಟನೆ ಮಾಡಿದ್ದಾರೆ. ಇದ್ರಲ್ಲಿ ಮುಖ್ಯವಾಗಿ ಕೊಚ್ಚಿಯ ಇಂಟರ್‌ನ್ಯಾಷನಲ್‌ ಶಿಪ್‌ ರಿಪೇರಿ ಫೆಸಿಲಿಟಿ, ಹಡಗು ನಿರ್ಮಾಣಕ್ಕೆ ಉಪಯೋಗವಾಗೋ ಡ್ರೈ ಡಾಕ್‌ ಫೆಸಿಲಿಟಿ ಹಾಗೂ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ LPG ಇಂಪೋರ್ಟ್‌ ಫೆಸಿಲಿಟಿಯನ್ನ ಉದ್ಘಾಟನೆ ಮಾಡಿದ್ದಾರೆ. ಇದಕ್ಕೂ ಮುಂಚೆ ಪಿಎಂ ಮೋದಿ ಗುರುವಾಯೂರಿನ ಶ್ರೀ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ಕೇರಳಾ ಬಿಜೆಪಿ ಆಯೋಜಿಸಿದ್ದ ಶಕ್ತಿ ಕೇಂದ್ರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply