15 ನೂತನ ಏರ್‌ಪೋರ್ಟ್‌ ಪ್ರಾಜೆಕ್ಟ್‌ಗಳನ್ನ ಉದ್ಘಾಟಿಸಿದ ಮೋದಿ!

masthmagaa.com:

ಉತ್ತರ ಪ್ರದೇಶಕ್ಕೆ ಆಗಮಿಸಿರೋ ಪ್ರಧಾನಿ ಮೋದಿ ಇದೀಗ 15 ನೂತನ ಏರ್‌ಪೋರ್ಟ್‌ ಪ್ರಾಜೆಕ್ಟ್‌ಗಳನ್ನ ವರ್ಚುವಲ್‌ ಆಗಿ ಉದ್ಘಾಟಿಸಿದ್ದಾರೆ. ಈ ಪೈಕಿ ಪುಣೆ, ಕೋಲ್ಹಾಪುರ, ಗ್ವಾಲಿಯರ್‌, ಜಬಾಲ್ಪುರ್‌, ದೆಹಲಿ, ಲಕ್ನೋ, ಅಲಿಘರ್‌, ಅಜಮ್‌ಗರ್‌, ಚಿತ್ರಕೂಟ್‌, ಮೊರಾದಬಾದ್‌, ಶ್ರಾವಸ್ತಿ ಮತ್ತು ಅದಂಪುರ್‌ ಏರ್‌ಪೋರ್ಟ್‌ಗಳಲ್ಲಿ ನೂತನ ಪ್ಯಾಸೆಂಜರ್‌ ಟರ್ಮಿನಲ್‌ಗಳನ್ನ ಉದ್ಘಾಟಿಸಲಾಗಿದೆ. ಅಲ್ದೇ ಕಡಪ, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಏರ್‌ಪೋರ್ಟ್‌ಗಳ ನೂತನ ಪ್ಯಾಸೆಂಜರ್‌ ಬಿಲ್ಡಿಂಗ್‌ಗೆ ಶಂಕುಸ್ಥಾಪನೆ ಮಾಡಲಾಗಿದೆ. ಇನ್ನು ತಮ್ಮ ಯುಪಿ ಭೇಟಿ ವೇಳೆ ಪಿಎಂ ಮೋದಿ ಇತರೆ ಹಲವು ಅಭಿವೃದ್ಧಿ ಯೋಜನೆಗಳನ್ನ ಕೂಡ ಉದ್ಘಾಟನೆ.. ಶಂಕು ಸ್ಥಾಪನೆ ಮಾಡಿದ್ದಾರೆ. ರಸ್ತೆ, ರೈಲ್ವೇ, ಒಳಚರಂಡಿಯಂತಹ ಅನೇಕ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಒಟ್ಟಾಗಿ ಸುಮಾರು 34,700 ಕೋಟಿ ರೂಪಾಯಿಗೂ ಅಧಿಕ ಯೋಜನೆಗಳನ್ನ ಉದ್ಘಾಟಿಸಿದ್ದಾರೆ.

-masthmagaa.com

Contact Us for Advertisement

Leave a Reply