ಪಾಕ್ ಪ್ರಧಾನಿಗೆ ಪ್ರಧಾನಿ ಮೋದಿ ಪತ್ರ! ಯಾಕೆ ಗೊತ್ತಾ?

masthmagaa.com:

ಪಾಕ್ ಪ್ರಧಾನಿ ಇಮ್ರಾನ್ ಖಾನ್​​​ಗೆ ಪ್ರಧಾನಿ ಮೋದಿ ಪತ್ರ ಬರೆದು ಪಾಕಿಸ್ತಾನ ದಿನಾಚರಣೆಯ ಶುಭಕೋರಿದ್ದಾರೆ. ಭಾರತ ಪಾಕಿಸ್ತಾನದ ಜೊತೆಗೆ ಸೌಹಾರ್ಧತೆ ಬಯಸುತ್ತೆ. ಆದ್ರೆ ಇದಕ್ಕಾಗಿ ಉಭಯದೇಶಗಳ ನಡುವೆ ಪರಸ್ಪರ ನಂಬಿಕೆ ಮತ್ತು ಭಯೋತ್ಪಾದನೆ ಅಂತ್ಯಗೊಳಿಸೋದು ತುಂಬಾ ಮುಖ್ಯ ಅಂತ ಕೂಡ ತಿಳಿಸಿದ್ದಾರೆ. ಇದು ಮಾನವತೆಗೇ ತುಂಬಾ ಕಠಿಣವಾದ ಸಮಯವಾಗಿದೆ. ಕೊರೋನಾ ವಿರುದ್ಧ ಹೋರಾಡಲು ನಿಮಗೂ, ನಿಮ್ಮ ದೇಶದ ಜನತೆಗೂ ಆ ದೇವರು ಶಕ್ತಿಯನ್ನು ನೀಡಲಿ ಅಂತ ಹೇಳಿದ್ದಾರೆ. ಅಂದಹಾಗೆ ಪ್ರತಿವರ್ಷವೂ ಪಾಕಿಸ್ತಾನ ದಿನಾಚರಣೆಯಂದು ಭಾರತದ ಪ್ರಧಾನಿ ಪಾಕಿಸ್ತಾನ ಪ್ರಧಾನಿಗೆ ಪತ್ರ ಬರೆಯೋ ಸಂಪ್ರದಾಯ ರೂಢಿಯಲ್ಲಿದೆ. ಮಾರ್ಚ್ 23ರಂದು ಪಕ್ಕದ ದೇಶದಲ್ಲಿ ಪಾಕಿಸ್ತಾನ ದಿನಾಚರಣೆ ಆಚರಿಸಲಾಗುತ್ತೆ. ಇದಕ್ಕೂ ಮುನ್ನ ಇಮ್ರಾನ್ ಖಾನ್​​​ಗೆ ಕೊರೋನಾ ಬಂದಾಗಲೂ ಬೇಗನೇ ಹುಷಾರಾಗುವಂತೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ರು.

-masthmagaa.com

Contact Us for Advertisement

Leave a Reply