ರಕ್ಷಣಾ ಕ್ಷೇತ್ರ ಹೊಸ 7 ಸಂಸ್ಥೆಗಳು! ದೇಶದಲ್ಲೇ ರೆಡಿಯಾಗಲಿವೆ ಶಸ್ತ್ರಾಸ್ತ್ರಗಳು!

masthmagaa.com:

ರಕ್ಷಣಾ ಇಲಾಖೆ ಕಡೆಯಿಂದ ಆಯೋಜಿಸಲಾಗಿದ್ದ ವಿಜಯ ದಶಮಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿದ್ರು. ಈ ವೇಳೆ ದೇಶಕ್ಕೆ 7 ಸರ್ಕಾರಿ ಸ್ವಾಮ್ಯದ ರಕ್ಷಣಾ ಸಂಸ್ಥೆಗಳನ್ನು ಅರ್ಪಿಸಿದ್ದಾರೆ. 41 ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಸೇರಿಸಿ ಈ ಸಂಸ್ಥೆಗಳನ್ನು ರಚಿಸಲಾಗಿದೆ. ಭಾರತವನ್ನು ತನ್ನದೇ ಬಲದಿಂದ ವಿಶ್ವದ ಶಕ್ತಿಶಾಲಿ ಮಿಲಿಟರಿ ದೇಶವನ್ನಾಗಿ ಮಾಡೋದು ಮುಂದಿರೋ ಗುರಿ ಅಂತ ಕೂಡ ಪ್ರಧಾನಿ ಮೋದಿ ಘೋಷಿಸಿದ್ರು. ರಕ್ಷಣಾ ಕ್ಷೇತ್ರದ ಸುಮಾರು 100 ಬಗೆಯ ಶಸ್ತ್ರಾಸ್ತ್ರಗಳನ್ನು ಇನ್ಮುಂದೆ ವಿದೇಶಗಳಿಂದ ಆಮದು ಮಾಡಿಕೊಳ್ಳಲ್ಲ.. ಬದಲಿಗೆ ಈ ಕಂಪನಿಗಳೇ ಉತ್ಪಾದಿಸಲಿವೆ. ಈಗಾಗಲೇ ಸರ್ಕಾರ 65 ಸಾವಿರ ಕೋಟಿ ರೂಪಾಯಿ ಮೊತ್ತದ ಶಸ್ತ್ರಾಸ್ತ್ರಗಳಿಗೆ ಆರ್ಡರ್ ನೀಡಿದೆ ಅಂತ ಕೂಡ ಪ್ರಧಾನಿ ಮೋದಿ ಹೇಳಿದ್ರು. ಸೂರತ್​​​ನಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾ ಬಳಿಕ ದೇಶದ ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ತಿದೆ ಅಂತ ಹೇಳಿದ್ಧಾರೆ.

-masthmagaa.com

Contact Us for Advertisement

Leave a Reply