ಇನ್ಮುಂದೆ 11 ಭಾಷೆಗಳಲ್ಲಿ ಇಂಜಿನಿಯರಿಂಗ್ ಶಿಕ್ಷಣ!

masthmagaa.com:

ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಒಂದು ವರ್ಷ ಭರ್ತಿಯಾದ ಹಿನ್ನೆಲೆ ಇವತ್ತು ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ರು. ಇದೇ ವೇಳೆ ಎಂಜಿನಿಯರಿಂಗ್​​ನ್ನು ಇನ್ಮುಂದೆ ಕನ್ನಡ ಸೇರಿದಂತೆ 11 ಸ್ಥಳೀಯ ಭಾಷೆಗಳಲ್ಲಿ ಪಾಠ ಮಾಡಲಾಗುತ್ತೆ. ಎಂಜಿನಿಯರಿಂಗ್​ನ್ನು 11 ಭಾಷೆಗೆ ಭಾಷಾಂತರ ಮಾಡಲು ಬೇಕಾದ ಸಾಫ್ಟ್​​ವೇರ್ ಅಭಿವೃದ್ಧಿ ಮಾಡಿದೀವಿ. ಇದ್ರಿಂದ ಬಡವರು, ದಲಿತರು ಮತ್ತು ಅಗತ್ಯ ಇರುವವರಿಗೆ ಸಹಾಯವಾಗುತ್ತೆ ಅಂದ್ರು. ಅಂದಹಾಗೆ ಕಳೆದ ವರ್ಷ ಮೋದಿ ಸಂಪುಟ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಈ ಮೂಲಕ ಇದು 1986ರ ಶಿಕ್ಷಣ ನೀತಿಯನ್ನು ಬದಲಿಸಿತ್ತು.

-masthmagaa.com

Contact Us for Advertisement

Leave a Reply