ಮೋದಿಗೆ ಗ್ಲೋಬಲ್ ಗೋಲ್ ಕೀಪರ್ ಪ್ರಶಸ್ತಿ

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರಿಗೆ ಗ್ಲೋಬಲ್ ಗೋಲ್ ಕೀಪರ್ ಪ್ರಶಸ್ತಿ ಸಿಕ್ಕಿದೆ. ಸ್ವಚ್ಛ ಭಾರತ ಅಭಿಯಾನಕ್ಕಾಗಿ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ಪಡೆದು ಮಾತನಾಡಿದ ಪ್ರಧಾನಿ ಮೋದಿ, ಈ ಪ್ರಶಸ್ತಿ ನನಗೆ ಸೇರಿದ್ದಲ್ಲ. ಸ್ವಚ್ಛ ಭಾರತವನ್ನು ಯಶಸ್ವಿಗೊಳಿಸುತ್ತಿರುವ ಕೋಟ್ಯಂತರ ಭಾರತೀಯರಿಗೆ ಸೇರಿದ್ದು. ಈ ಪ್ರಶಸ್ತಿಯನ್ನು ನಾನು ಕೋಟ್ಯಂತರ ಭಾರತೀಯರಿಗೆ ಸಮರ್ಪಿಸುತ್ತೇನೆ ಅಂತ ಹೇಳಿದ್ದಾರೆ. ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯ ಹೊತ್ತಲ್ಲಿ ನನಗೆ ಈ ಪ್ರಶಸ್ತಿ ಸಿಕ್ಕಿರೋದು ವೈಯಕ್ತಿಕವಾಗಿ ತುಂಬಾ ಮಹತ್ವ ಪಡೆದಿದೆ. 130 ಕೋಟಿ ಜನ ಯಾವುದಾದ್ರೂ ಒಂದು ವಿಚಾರದಲ್ಲಿ ಧೃಡ ಸಂಕಲ್ಪ ಮಾಡಿದ್ರೆ, ಯಾವುದೇ ಸವಾಲನ್ನು ಬೇಕಾದ್ರೂ ಗೆಲ್ಲಬಹುದು ಎಂದು ಕರೆಕೊಟ್ಟರು.

Contact Us for Advertisement

Leave a Reply