ಕ್ಸಿ ಜಿನ್ ಪಿಂಗ್ ಗೆ ವಿಶೇಷ ಶಾಲು ಗಿಫ್ಟ್ ಕೊಟ್ಟ `ನಮೋ’

ಪ್ರಧಾನಿ ಮೋದಿಯವರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ವಿಶೇಷ ಶಾಲ್ ಗಿಫ್ಟ್ ಕೊಟ್ಟಿದ್ದಾರೆ. ಇದರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಫೋಟೋ ಇದೆ. ಕೊಯಂಬತ್ತೂರು ಜಿಲ್ಲೆಯ ಶ್ರೀರಾಮಲಿಂಗ ಸೋವದಂಬೀಗಯಿ ಹ್ಯಾಂಡ್ಲೂಮ್ ಕೋ ಆಪರೇಟಿವ್ ಸೊಸೈಟಿಯ ನೇಕಾರರು ತಯಾರಿಸಿದ್ದಾರೆ. ಇದನ್ನು ಮಲಬಾರಿ ಸಿಲ್ಕ್ ಮತ್ತು ಚಿನ್ನದ ಝರಿಗಳಿಂದ ರಚಿಸಲಾಗಿದೆ. ಶಾಲಿನ ಎರಡೂ ಕಡೆಗಳಲ್ಲಿ ಹೂವಿನ ಡಿಸೈನ್ ಮಾಡಲಾಗಿದೆ. ಇದನ್ನು ನಿರ್ಮಿಸಲು ಬರೋಬ್ಬರಿ 5 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಈ ಶಾಲ್‍ನಲ್ಲಿ ಜಿನ್ ಪಿಂಗ್ ಜೀವಂತವಾಗಿರುವಂತೆ ಭಾಸವಾಗುತ್ತೆ.

Contact Us for Advertisement

Leave a Reply