PM MODI ಮಾನವ ಹಕ್ಕು ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ?

masthmagaa.com:

28ನೇ ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ದ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಮಾತಾಡಿದ್ರು. ಈ ವೇಳೆ, ‘ಕೆಲ ವ್ಯಕ್ತಿಗಳು ಮಾನವ ಹಕ್ಕುಗಳ ಉಲ್ಲಂಘನೆಯನ್ನ ಕೆಲ ಪ್ರಕರಣಗಳಲ್ಲಿ ಮಾತ್ರ ಕಾಣ್ತಾರೆ. ಇನ್ನೂ ಕೆಲ ಪ್ರಕರಣಗಳಲ್ಲಿ ಅವರಿಗೆ ಮಾನವ ಹಕ್ಕು ಉಲ್ಲಂಘನೆ ಆಗಿರೋದು ಕಾಣೋದೇ ಇಲ್ಲ’ ಅಂದ್ರು. ಈ ರೀತಿ ‘ಸೆಲೆಕ್ಟಿವ್ ಬಿಹೇವಿಯರ್’ ಪ್ರಜಾಪ್ರಭುತ್ವಕ್ಕೆ ಹಾನಿಕಾರಕ ಅಂತ ಹೇಳಿದ್ರು. ಕೆಲವರು ಈ ರೀತಿ ರಾಜಕೀಯಕ್ಕೆ ಮಾನವ ಹಕ್ಕುಗಳನ್ನ ಬಳಸೋ ಮೂಲಕ ದೇಶದ ಇಮೇಜಿಗೆ ಧಕ್ಕೆ ತರ್ತಿದ್ದಾರೆ ಅಂತ ಆರೋಪ ಮಾಡಿದ್ರು. ದಶಕಗಳಿಂದ ಮುಸ್ಲಿಂ ಮಹಿಳೆಯರು ತ್ರಿಪಲ್ ತಲಾಖ್ ತೆಗೆದುಹಾಕುವಂತೆ ಕೇಳ್ಕೊಳ್ತಾ ಇದ್ರು. ನಾವು ಅವರಿಗೆ ಆ ಕಾನೂನನ್ನ ಕೊಟ್ವಿ. ಅದೇ ಥರ ಹಜ್ ವೇಳೆ ಮುಸ್ಲಿಂ ಮಹಿಳೆಯರು ‘ಮಹ್ರಮ್’ ಜೊತೆ ಹೋಗುವ ಸಂಪ್ರದಾಯವನ್ನೂ ತೆಗೆದು ಹಾಕಿದ್ವಿ ಅಂತ ಹೇಳಿದ್ರು. ಮುಸ್ಲಿಮರಲ್ಲಿ ಮಹ್ರಮ್ ಅಂದ್ರೆ ಇಸ್ಲಾಮಿಕ್ ನಿಯಮಗಳಲ್ಲಿ ಯಾವ ಪುರುಷನನ್ನ ಮದುವೆ ಆಗಲು ಸಾಧ್ಯವೇ ಇಲ್ಲವೋ ಅಂತಹ ವ್ಯಕ್ತಿ. ಆತನನ್ನ ಪ್ರಯಾಣದ ವೇಳೆ ಜೊತೆಗೆ ಕರೆದುಕೊಂಡು ಹೋಗಬೇಕು ಅನ್ನೋ ಪದ್ದತಿ. ಹಾಗೇ ಮುಂದುವರಿದು ಮಾತನಾಡಿದ ಪ್ರಧಾನಿ, ‘ಭಾರತದಲ್ಲಿ ಈಗ 26 ವಾರಗಳ ವೇಥನ ಸಹಿತ ಮಾತೃತ್ವ ರಜೆ ಇದೆ. ಇದು ಆ ನವಜಾತ ಶಿಶುವಿನ ಹಕ್ಕುಗಳ ರಕ್ಷಣೆ ಮಾಡಿದಂತೆ’ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply