75ನೇ ಸ್ವಾತಂತ್ರ್ಯ ಹಬ್ಬದ ಕಂಪ್ಲೀಟ್ ಹೈಲೈಟ್ಸ್ ಇಲ್ಲಿದೆ…

masthmagaa.com:

ಇವತ್ತು ಭಾರತಕ್ಕೆ 75ನೇ ಸ್ವಾತಂತ್ರ್ಯ ಸಂಭ್ರಮ.. ದೇಶದೆಲ್ಲೆಡೆ ಇವತ್ತು ತುಂಬಾ ಅದ್ಧೂರಿಯಾಗಿ ಸ್ವಾತಂತ್ರ್ಯದ ಹಬ್ಬವನ್ನು ಆಚರಿಸಲಾಯ್ತು. ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ, 90 ನಿಮಿಷ ಭಾಷಣ ಮಾಡಿದ್ರು. ಈ ವೇಳೆ ಹಲವು ಘೋಷಣೆಗಳನ್ನು ಮಾಡಿದ್ರು. ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ದೇಶೀ ಉತ್ಪಾದಕರು ಕಾಂಪಿಟಿಷನ್ ಕೊಡೋಕೆ ಮತ್ತು ಉದ್ಯಮ ಆರಂಭಿಸಲು ನೆರವಾಗೋಕೆ 100 ಲಕ್ಷ ಕೋಟಿ ರೂಪಾಯಿ ಮೊತ್ತದ ಗತಿಶಕ್ತಿ ಯೋಜನೆ ಶುರು ಮಾಡಲಾಗುತ್ತೆ. ಇದ್ರಿಂದ ಕೋಟ್ಯಂತರ ಜನರಿಗೆ ಕೆಲಸ ಸಿಗಲಿದೆ ಅಂದ್ರು. ಭಾರತೀಯ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್ ಗಳು ವಿಶ್ವಮಟ್ಟಕ್ಕೆ ಹೋಗಲು ಸಹಾಯವಾಗುವಂತೆ ಅನಗತ್ಯ ಕಾನೂನುಗಳು ಹಾಗೂ ಪ್ರೊಸೀಜರ್ ಗಳಿಂದ ಮುಕ್ತಿ ನೀಡ್ತೀವಿ ಅಂತ ಭರವಸೆ ನೀಡಿದ್ರು. ಇದ್ರ ಜೊತೆಗೆ 75 ವಾರಗಳಲ್ಲಿ 75 ವಂದೇ ಭಾರತ್ ರೈಲುಗಳ ಆರಂಭಿಸ್ತೀವಿ, ಉಡಾನ್ ವಿಮಾನಯಾನ ವಿಸ್ತರಣೆ ಮಾಡ್ತೀವಿ, ಜಮ್ಮು ಕಾಶ್ಮೀರದಲ್ಲಿ ಚುನಾವಣೆಗೆ ಸಿದ್ಧತೆ ನಡೀತಾ ಇದೆ ಅಂತ ಘೋಷಿಸಿದ್ರು. ಇನ್ನು ಇಂಧನ ಸ್ವಾವಲಂಬನೆಗಾಗಿ ರಾಷ್ಟ್ರೀಯ ಜಲಜನಕ ಮಿಷನ್ ರಚಿಸೋ ಮೂಲಕ ದೊಡ್ಡಮಟ್ಟದಲ್ಲಿ ಜಲಜನಕ ರಫ್ತು ಮಾಡೋ ದೇಶವಾಗಲಿದೆ ಅಂದ್ರು. ಸೈನಿಕ ಶಾಲೆಗಳಲ್ಲಿ ಹೆಣ್ಮಕ್ಕಳಿಗೂ ಪ್ರವೇಶ ಕಲ್ಪಿಸೋದಾಗಿ ಹೇಳಿದ್ರು. ನೂರನೇ ಸ್ವಾತಂತ್ರ್ಯೋತ್ಸವದ ಒಳಗೆ ಭಾರತ ಇಂಧನ ಸ್ವಾವಲಂಬನೆ ಸಾಧಿಸಲು ಈಗಿನಿಂದಲೇ ರೋಡ್ ಮ್ಯಾಪ್ ಹಾಕಿಕೊಳ್ಳಲಾಗುತ್ತೆ. 2030ರ ಒಳಗೆ ಭಾರತೀಯ ರೇಲ್ವೇ ಝೀರೋ ಪರ್ಸೆಂಟ್​​ ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವ ಸಾರಿಗೆ ವ್ಯವಸ್ಥೆ ಆಗಲಿದೆ ಅಂದ್ರು. ಅದೇ ರೀತಿ ದೇಶಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು, ವಲ್ಲಭ್​ಭಾಯ್ ಪಟೇಲ್​ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ದೇಶ ಯಾವತ್ತೂ ಋಣಿಯಾಗಿರುತ್ತೆ ಅಂದ್ರು. ಸುಭಾಶ್ ಚಂದ್ರ ಬೋಸ್​, ರಾಣಿ ಲಕ್ಷ್ಮೀಭಾಯಿಯವ್ರನ್ನು ಕೂಡ ನೆನಪಿಸಿಕೊಂಡ್ರು.

ಆದ್ರೆ ಕಾಂಗ್ರೆಸ್ ನಾಯಕರು ಮಾತ್ರ, ಪ್ರಧಾನಿ ಮೋದಿ ಕಳೆದ 7 ವರ್ಷಗಳಿಂದಲೂ ಇದೇ ಭಾಷಣ ಮಾಡ್ತಾ ಬಂದಿದ್ದಾರೆ. ಅದ್ರಲ್ಲೇನೂ ವಿಶೇಷತೆ ಇಲ್ಲ ಎಂದಿದ್ದಾರೆ.

ಇನ್ನು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಧ್ವಜಾರೋಹಣ ಮಾಡಿ, ಭಾಷಣ ಮಾಡಿದ್ರು. ಇದೇ ರೀತಿ ಇಡೀ ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಆಯಾ ಸಿಎಂಗಳು ಧ್ವಜಾರೋಹಣ ಮಾಡಿ ಭಾಷಣ ಮಾಡಿದ್ರು. ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಮತ್ತು ಶಾಲೆಗಳಲ್ಲಿ ಧ್ವಜಾರೋಹಣ ಮಾಡಲಾಯ್ತು. ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಕೊಡುಗೆಯನ್ನ ನೆನೆಯಲಾಯ್ತು.

-masthmagaa.com

Contact Us for Advertisement

Leave a Reply