I.N.D.I.A ಒಕ್ಕೂಡ ʻಸನಾತನ ಧರ್ಮʼವನ್ನ ನಾಶ ಮಾಡಲು ನೋಡ್ತಿದೆ: ಮೋದಿ

masthmagaa.com:

ಸನಾತನ ಧರ್ಮ ಅವಹೇಳನ ಯುದ್ಧಕ್ಕೆ ಈಗ ಪ್ರಧಾನಿ ಮೋದಿ ಎಂಟ್ರಿ ಕೊಟ್ಟಿದ್ದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆದ ರ‍್ಯಾಲಿಯೊಂದ್ರಲ್ಲಿ ಮಾತಾಡಿರುವ ಮೋದಿ, ವಿಪಕ್ಷಗಳ ಒಕ್ಕೂಟ ಘಮಂಡಿಯಾ(ಅಹಂಕಾರಿ), ಸನಾತನ ಧರ್ಮವನ್ನ ನಾಶ ಮಾಡ್ಬೇಕು ಅಂತ ಬಯಸುತ್ತಿದೆ ಅಂತ ಕಿಡಿಕಾರಿದ್ದಾರೆ. ಇದೇ ವೇಳೆ ದೇಶ ಹಾಗೂ ಸಮಾಜವನ್ನ ವಿಭಜಿಸಲು ಕೆಲವು ಗುಂಪುಗಳು ಕೆಲಸ ಮಾಡ್ತಿದ್ದು, ಅವ್ರೆಲ್ಲಾ ಒಟ್ಟಾಗಿ INDI ಒಕ್ಕೂಟವನ್ನ ರಚಿಸಿದ್ದಾರೆ. (INDIA ಒಕ್ಕೂಟವನ್ನ ಮೋದಿ INDI ಅಂತ ಕರೆದಿದ್ದಾರೆ.) ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಈ ಒಕ್ಕೂಟ ಹಿಡನ್‌ ಅಜೆಂಡಾ ಹೊಂದಿದೆ ಅಂತ ಮೋದಿ ಆರೋಪಿಸಿದ್ದಾರೆ. ಅಷ್ಟೆ ಅಲ್ದೆ ಸನಾತನ ಧರ್ಮವನ್ನ ಮುಗಿಸುವ ನಿರ್ಣಯದೊಂದಿಗೆ ಮೈತ್ರಿ ಅನುಷ್ಠಾನಕ್ಕೆ ಬಂದಿದೆ. ಒಕ್ಕೂಟದ ಈ ನಿರ್ಣಯ ಹಲವರಿಗೆ ಸ್ಪೂರ್ತಿ ನೀಡಿದ್ದು, ಸನಾತನ ಧರ್ಮವನ್ನ ನಿರ್ಮೂಲನೆ ಮಾಡ್ಬೇಕು ಅನ್ನೋ ಹೇಳಿಕೆ ಕೊಡುವ ಮೂಲಕ ತಮ್ಮ ಲೈನ್‌ ಕ್ರಾಸ್‌ ಮಾಡಿದ್ದಾರೆ ಅಂತ ಪರೋಕ್ಷವಾಗಿ ಉದಯನಿಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಇಂದು ಒಕ್ಕೂಟದ ನಾಯಕರು ಬಹಿರಂಗವಾಗಿ ಸನಾತನ ಧರ್ಮವನ್ನು ಟಾರ್ಗೆಟ್‌ ಮಾಡಲು ಶುರು ಮಾಡಿದ್ದಾರೆ. ನಾಳೆ ನಮ್ಮ ಮೇಲೆ ದಾಳಿ ಮಾಡೋದನ್ನ ಹೆಚ್ಚಿಸುತ್ತಾರೆ. ಹೀಗಾಗಿ ದೇಶದಾದ್ಯಂತ ಇರುವ ಎಲ್ಲಾ ಸನಾತನಿಗಳು ಮತ್ತು ನಮ್ಮ ದೇಶವನ್ನು ಪ್ರೀತಿಸುವ ಜನರು ಎಚ್ಚೆತ್ತುಕೊಳ್ಳಬೇಕು. ಅಂತಹವರನ್ನು ನಾವು ತಡೆಯಬೇಕು ಅಂತ ಮೋದಿ ಕರೆ ನೀಡಿದ್ದಾರೆ. ಇತ್ತ ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮವಾಗಿದ್ದು, ಅದರ ಶಾಶ್ವತತೆ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ ಅಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply