ಮೆಹುಲ್ ಚೋಕ್ಸಿಯಿಂದ ಮತ್ತೊಂದು ಬ್ಯಾಂಕ್ ಗೆ ವಂಚನೆ..!

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿ ಮೆಹುಲ್ ಚೋಕ್ಸಿ ದೇಶ ಬಿಟ್ಟು ಓಡಿಹೋಗಿ ಆಂಟಿಗುವಾದಲ್ಲಿ ನೆಲೆಸಿದ್ದಾರೆ. ಭಾರತದ ತನಿಖಾ ಸಂಸ್ಥೆಗಳು ಮೆಹುಲ್ ಚೋಕ್ಸಿಯನ್ನು ದೇಶಕ್ಕೆ ವಾಪಸ್ ಕರೆತರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಇದೇ ಟೈಮಲ್ಲಿ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾತ್ರವಲ್ಲದೆ ಪಂಜಾಬ್ ಸಿಂಧ್ ಬ್ಯಾಂಕ್ ಗೂ ಉಂಡೇನಾಮ ತಿಕ್ಕಿದ್ದಾನೆ ಅನ್ನೋದು ಬಯಲಿಗೆ ಬಂದಿದೆ. ಸಾರ್ವಜನಿಕ ವಲಯದ ಪಂಜಾಬ್ ಸಿಂಧ್ ಬ್ಯಾಂಕ್‍ಗೆ 44.1 ಕೋಟಿ ರೂಪಾಯಿ ಮೋಸ ಮಾಡಿದ್ದಾನೆ ಅಂತ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಹುಲ್ ಚೋಕ್ಸಿ ಮಾಲೀಕತ್ವದ ಗೀತಾಂಜಲಿ ಜೆಮ್ಸ್ ಲಿಮಿಟೆಡ್ ಸಂಸ್ಥೆ ಪಂಜಾಬ್ ಸಿಂಧ್ ಬ್ಯಾಂಕ್‍ನಲ್ಲಿ ಲೋನ್ ಪಡೆದಿತ್ತು. ಆದ್ರೆ ಚೋಕ್ಸಿ ಲೋನ್ ಮೊತ್ತವನ್ನು ವಾಪಸ್ ಮಡದೇ ಇದ್ದಿದ್ದರಿಂದ ಅದನ್ನು 2018ರ ಮಾರ್ಚ್ 31ರಲ್ಲಿ ಎನ್‍ಪಿಎ ಅಂದ್ರೆ ನಾನ್ ಪಫಾರ್ಮಿಂಗ್ ಅಮೌಂಟ್ ಎಂದು ಘೋಷಿಸಲಾಯ್ತು ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಸಿಬಿಐ ಅಧಿಕಾರಿಗಳು ಮೆಹುಲ್ ಚೋಕ್ಸಿಯನ್ನು ಪರಾರಿಯಾದ ಆರೋಪಿ ಎಂದು ಘೋಷಿಸಬೇಕು ಎಂದು ಮುಂಬೈ ಕೋರ್ಟ್ ಮೊರೆ ಹೋಗಿದ್ದಾರೆ. ಅತ್ತ ಈ ಬಗ್ಗೆ ಪ್ರತಿಕ್ರಿಯಿಸಿರುವ ಆಂಟಿಗುವಾ ಪ್ರಧಾನಿ ಗೈಸ್ಟನ್ ಬ್ರೌನ್, ಭಾರತದ ತನಿಖಾ ಸಂಸ್ಥೆಗಳು ಮೆಹುಲ್ ಚೋಕ್ಸಿಯವರನ್ನು ಯಾವಾಗ ಬೇಕಾದ್ರೂ ಬಂದು ತನಿಖೆ ನಡೆಸಬಹುದು ಎಂದು ತಿಳಿಸಿದ್ದಾರೆ.

Contact Us for Advertisement

Leave a Reply