ಯುಕ್ರೇನ್‌ ಅಧ್ಯಕ್ಷರ ಹತ್ಯೆಗೆ ಸಂಚು: ಪೋಲೆಂಡ್‌ ಪ್ರಜೆಯ ಬಂಧನ!

masthmagaa.com:

ಮಿಡಲ್‌ ಈಸ್ಟ್‌ನಲ್ಲಿ ಯುದ್ಧದ ತೀವ್ರತೆ ಹೆಚ್ಚಾಗ್ತಿದ್ದಂತೆ ಅತ್ತ ಯುಕ್ರೇನ್‌-ರಷ್ಯಾ ಸಂಘರ್ಷದಲ್ಲಿ ಕೂಡ ದೊಡ್ಡ ಬೆಳವಣಿಗೆಯಾಗಿದೆ. ಇದೀಗ ಯುಕ್ರೇನ್‌ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವ್ರ ಹತ್ಯೆಗೆ ಸಂಚು ರೂಪಿಸ್ತಿದ್ದ ಪೋಲೆಂಡ್‌ ಪ್ರಜೆಯೊಬ್ಬನನ್ನ ಪೋಲೆಂಡ್‌ನಲ್ಲಿ ಬಂಧಿಸಲಾಗಿದೆ. ಪವೆಲ್.ಕೆ ಅನ್ನೊ ಈತ‌ ರಷ್ಯಾದ ಏಜೆಂಟ್‌ಗಳಿಗೆ ಏರ್‌ಪೋರ್ಟ್ ಸೆಕ್ಯುರಿಟಿ ಇನ್ಫಾರ್ಮೆಶನ್‌ ನೀಡಲು ರೆಡಿಯಾಗಿದ್ದ ಅಂತ ಪೋಲೆಂಡ್‌ನ ನ್ಯಾಷನಲ್‌ ಪ್ರಾಸಿಕ್ಯೂಟರ್‌ ಆಫೀಸ್‌ ಹೇಳಿದೆ. ಈತ ಯುಕ್ರೇನ್‌ ಜೊತೆಗೆ ಯುದ್ದದಲ್ಲಿ ಸೆಣಸೆಡ್ತಿರೊ ರಷಿಯನ್ನರೊಂದಿಗೆ ನೇರ ಸಂಪರ್ಕ ಸಾಧಿಸಲು ಯತ್ನಿಸಿದ್ದ. ಅಲ್ದೇ ಯುಕ್ರೇನ್‌ಗೆ ಇಂಟರ್‌ನ್ಯಾಷನಲ್‌ ಮಿಲಟರಿ ಹಾಗೂ ಮಾನವೀಯ ನೆರವು ಪೂರೈಸಲು ಗೇಟ್‌ ವೇ ತರ ಇರೋ ಆಗ್ನೇಯ ಪೋಲೆಂಡ್‌ನ ಗಡಿಯಲ್ಲಿರೊ ಜೆರ್‌ಸ್ಟೋವ್‌ಜಸಿಯೊಂಕಾ ಏರ್‌ಪೋರ್ಟ್‌ ಸೆಕ್ಯುರಿಟಿ ಬಗ್ಗೆ ರಷಿಯನ್ನರಿಗೆ ಮಾಹಿತಿ ನೀಡಲು ಮುಂದಾಗಿದ್ದ ಅಂತ ಈ ಆಫೀಸ್‌ ಹೇಳಿದೆ.

-masthmagaa.com

Contact Us for Advertisement

Leave a Reply