ದೊಡ್ಡ ಉಗ್ರದಾಳಿ ಸಂಚು ವಿಫಲ! ಪಂಜಾಬ್​​ನಲ್ಲಿ ಸಿಕ್ಕಿದ್ದೇನು ಗೊತ್ತಾ?

masthmagaa.com:

ಗಣರಾಜ್ಯೋತ್ಸವ ಹೊತ್ತಲ್ಲಿ ನಡೆಯಬಹುದಾಗಿದ್ದ ಉಗ್ರ ದಾಳಿಯನ್ನು ಪಂಜಾಬ್ ಪೊಲೀಸರು ವಿಫಲಗೊಳಿಸಿದ್ದಾರೆ. ಗುರುದಾಸ್​​​ಪುರದಲ್ಲಿ ಪೊಲೀಸರು ದೊಡ್ಡಮಟ್ಟದಲ್ಲಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಅಂಡರ್ ಬ್ಯಾರಲ್ ಗ್ರನೇಡ್ ಲಾಂಚರ್, ಗ್ರನೇಡ್, 3.79 ಕೆಜಿ ಆರ್​​ಡಿಎಕ್ಸ್​​, 9 ಎಲೆಕ್ಟ್ರಿಕಲ್ ಡೆಟೋನೇಟರ್ಸ್​​​ ಮತ್ತು 2 ಸೆಟ್ ಎಲ್​​ಇಡಿಯ ಟೈಮರ್ ಡಿವೈಸ್​​ಗಳು ಪತ್ತೆಯಾಗಿವೆ ಅಂತ ಐಜಿಪಿ ಮೋಹ್​​ನಿಶ್ ಚಾವ್ಲಾ ತಿಳಿಸಿದ್ದಾರೆ. ಮಲ್​​ಕೀತ್ ಸಿಂಗ್ ಎಂಬಾತನ ಬಂಧನದ ಬಳಿಕ ಈ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದ್ರ ಬೆನ್ನಲ್ಲೇ ಪಿತೂರಿಯಲ್ಲಿ ಭಾಗಿಯಾಗಿದ್ದ ಸುಖ್​ಪ್ರೀತ್ ಸಿಂಗ್​, ಥರನ್​ಜೋತ್ ಸಿಂಗ್​, ಸುಖ್​ಮೀತ್​​ಪಾಲ್ ಸಿಂಗ್​​​, ಗ್ಯಾಂಗ್​ಸ್ಟರ್ ಅರ್ಶ್​​ದೀಪ್ ಸಿಂಗ್​​​​​, ಪಾಕಿಸ್ತಾನ ಮೂಲದ ಸಿಖ್ ಯೂತ್ ಫೆಡರೇಷನ್ ಚೀಫ್ ಲಖ್ಬೀರ್ ಎಸ್ ರೋಡ್​​​ ಅರೆಸ್ಟ್ ಆಗಿದ್ದಾರೆ ಅಂತ ಕೂಡ ಐಜಿಪಿ ಮೋಹ್​​ನೀಶ್ ಚಾವ್ಲಾ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 3ರಂದು ಇದೇ ಗುರುದಾಸ್​​ಪುರದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​​ಐ ಬೆಂಬಲಿತ ಉಗ್ರ ಸಂಚನ್ನು ವಿಫಲಗೊಳಿಸಲಾಗಿತ್ತು. ಟಿಫಿನ್ ಸ್ಫೋಟಕ ಮತ್ತು ನಾಲ್ಕು ಹ್ಯಾಂಡ್ ಗ್ರನೇಡ್​​ಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ, ಅದು ಕೂಡ ಗಣರಾಜ್ಯೋತ್ಸವ ಹತ್ತಿರದಲ್ಲಿರುವ ಹೊತ್ತಲ್ಲಿ ಶಸ್ತ್ರಾಸ್ತ್ರ ಪತ್ತೆಯಾಗಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ತನಿಖೆ ಮುಂದುವರಿದಿದೆ.

-masthmagaa.com

Contact Us for Advertisement

Leave a Reply