ಪಾಕ್​ನಲ್ಲಿ ಮೆರಿ ಕ್ರಿಸ್​ಮಸ್ ಅಂತ ಬರೆಯಲ್ಲ ಎಂದ ಬೇಕರಿ ನೌಕರ!

masthmagaa.com:

ಪಾಕಿಸ್ತಾನದ ಫೇಮಸ್ ಬೇಕರಿ ಡೆಲಿಜಿಯಾದಲ್ಲಿ ನೌಕರನೊಬ್ಬ ಕೇಕ್ ಮೇಲೆ ಮೆರಿ ಕ್ರಿಸ್​ಮಸ್​ ಅಂತ ಬರೆಯೋಕೆ ನಿರಾಕರಿಸಿದ್ದಾನೆ. ಸೆಲೆಸ್ಟಿಯಾ ನಸೀಂ ಖಾನ್ ಅನ್ನೋರು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿ ಈ ಆರೋಪ ಮಾಡಿದ್ದಾರೆ. ಡಿಫೆನ್ಸ್ ಹೌಸಿಂಗ್ ಸೊಸೈಟಿ ಬ್ರಾಂಚ್​​ನಲ್ಲಿ ನಾನು ಕ್ರಿಸ್​ಮಸ್​ಗೆ ಕೇಕ್ ತಗೊಳ್ಳಕ್ಕೆ ಹೋಗಿದ್ದೆ. ಆದ್ರೆ ಅಲ್ಲಿದ್ದ ನೌಕರ ಕೇಕ್​ ಮೇಲೆ ಮೆರಿ ಕ್ರಿಸ್​ಮಸ್​ ಅಂತ ಬರೆಯೋಕೆ ನಿರಾಕರಿಸಿದ್ದಾನೆ ಅಂತ ಬರೆದುಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗಿದ್ದು, ಡೆಲಿಜಿಯಾ ಬೇಕರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಬೇಕರಿ ಮ್ಯಾನೇಜ್ಮೆಂಟ್, ನಾವು ಧರ್ಮದ ಆಧಾರದಲ್ಲಿ ಹಾಗೆಲ್ಲಾ ಬೇಧ-ಭಾವ ಮಾಡೋದಿಲ್ಲ. ಈ ಬಗ್ಗೆ ತನಿಖೆ ನಡೆಸ್ತೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply