ಅಮೆರಿಕ ಗಡಿಯ ಮೆಕ್ಸಿಕೋದಲ್ಲಿ ಭಾರೀ ಭೂಕಂಪ

masthmagaa.com:

ಅಮೆರಿಕದೊಂದಿಗೆ ದಕ್ಷಿಣದಲ್ಲಿ ಗಡಿ ಹಂಚಿಕೊಂಡಿರೋ ದೇಶ ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪನ ಉಂಟಾಗಿದೆ. 7.1 ತೀವ್ರತೆಯ ಭೂಕಂಪನದಿಂದಾಗಿ ಆಕಾಪುಲ್ಕೋ ನಗರದಲ್ಲಿ ಕಟ್ಟಡಗಳು ಅಲುಗಾಡಿವೆ. ಕಂಬ ಬಿದ್ದು ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಪ್ರಭಾವ ಎಷ್ಟಿತ್ತು ಅಂದ್ರೆ ನೂರಾರು ಕಿಲೋಮೀಟರ್ ದೂರದ ಮೆಕ್ಸಿಕೋ ರಾಜಧಾನಿ ‘ಮೆಕ್ಸಿಕೋ ಸಿಟಿ’ಯಲ್ಲೂ ಕಂಪನದ ಅನುಭವಗಳಾಗಿವೆ. ಗೆರೆರೋ ರಾಜ್ಯದ ಆಕಾಪುಲ್ಕೋ ಸಿಟಿಯಿಂದ 11 ಕಿಮೀ ದೂರದಲ್ಲಿ ಕಂಪನದ ಕೇಂದ್ರ ಗುರುತಿಸಲಾಗಿದೆ.

-masthmagaa.com

Contact Us for Advertisement

Leave a Reply