ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ PD 35 ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣ!!

ಜುಲೈ 4 ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್  ದೇವರಾಜ್ ಹುಟ್ಟುಹಬ್ಬ. ಈ‌‌ ಸಂಭ್ರಮದ ಸವಿನೆನಪಿಗಾಗಿ PD35 ಚಿತ್ರತಂಡ  ಪ್ರಜ್ವಲ್ ಅವರಿಗೆ ಸರ್ಪ್ರೈಸ್ ಗಿಫ್ಟ್ ನೀಡಲಿದೆ. PD35 ಅಂದರೆ ಪ್ರಜ್ವಲ್ ದೇವರಾಜ್ 35 ಎಂಬ ಅರ್ಥ. ಇದು ಅವರ ಅಭಿನಯದ 35ನೇ ಚಿತ್ರ.ಅದೇ ದಿನ ಈ ನೂತನ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣಗೊಳ್ಳಲಿದೆ.
ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ಅವರು ನಿರ್ಮಿಸುತ್ತಿರುವ ಈ‌ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ‌. ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ‌ ಪ್ರಭುದೇವ ನಟಿಸುತ್ತಿದ್ದಾರೆ.
Contact Us for Advertisement

Leave a Reply