ಕುತೂಹಲ ಕೆರಳಿಸಿದ ರಾಹುಲ್ ಗಾಂಧಿ – ಪ್ರಶಾಂತ್​ ಕಿಶೋರ್ ಭೇಟಿ

masthmagaa.com:

ಪಂಜಾಬ್ ನಲ್ಲಿ ಸಿಎಂ ಅಮರಿಂದರ್ ಸಿಂಗ್ ಕ್ಯಾಪ್ಟನ್ ಜೊತೆ ಕಿತ್ತಾಡುತ್ತಿರೋ ನವಜೋತ್ ಸಿಂಗ್ ಸಿಧು ಹೊಸ ಗೇಮ್ ಶುರು ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಅಮರಿಂದರ್ ಸಿಂಗ್ ಬದಿಗೆ ಸರಿಸಿ ತಾವು ಉನ್ನತ ಸ್ಥಾನಕ್ಕೇರಲು ಸಿಧು ನಿರಂತರವಾಗಿ ಟ್ರೈ ಮಾಡ್ತಾನೇ ಬರ್ತಿದ್ದಾರೆ. ಇದೇ ಕಾರಣಕ್ಕೆ ಈಗ ಆಮ್ ಆದ್ಮಿ ಪಾರ್ಟಿ ಬಗ್ಗೆ ಒಳ್ಳೆ ಮಾತನಾಡಿ ತಮ್ಮ ನಾಯಕರಿಗೆ ಬ್ಲಾಕ್ ಮೇಲ್ ಶುರು ಮಾಡಿದ್ದಾರೆ. ನಮ್ಮ ಪ್ರತಿಪಕ್ಷ ಆಮ್ ಆದ್ಮಿ ಪಾರ್ಟಿ ನಿರಂತರವವಾಗಿ ನನ್ನ ಕೆಲಸ ಹಾಗೂ ಯೋಜನೆಗಳನ್ನ ಬೆಂಬಲಿಸುತ್ತಾ ಬಂದಿದೆ ಅಂತ ಹೇಳಿಕೆ ನೀಡಿದ್ದಾರೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಪಾಲಿಗೆ ಆಮ್ ಆದ್ಮಿ ಪಾರ್ಟಿ ದೊಡ್ಡ ಶತ್ರು, ಎದುರಾಳಿ. ಆದ್ರೆ ಕಳೆದ ಹಲವು ದಿನಗಳಿಂದ ಸಿಧು ಆಪ್ ಗೆ ಹೋಗಬಹುದು ಅನ್ನೋ ಗುಸುಗುಸು ಇದೆ.

ಇದರ ಬೆನ್ನಲ್ಲೇ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆಲುವಿನ ಸ್ಟ್ರಾಟೆಜಿ ಮಾಡಿದ್ದ ಪ್ರಶಾಂತ್ ಕಿಶೋರ್ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. 2017ರಲ್ಲಿ ಬಿಜೆಪಿ ಬಿಟ್ಟು ಹೊರಟಿದ್ದ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ಸಾ ಅಥವಾ ಆಪಾ ಅಂತ ಗೊಂದಲದಲ್ಲಿದ್ರು. ಆಗ ಪ್ರಶಾಂತ್ ಕಿಶೋರ್ ಸಿಧುರನ್ನ ಕಾಂಗ್ರೆಸ್ ಬುಟ್ಟಿಗೆ ಜಾರುವಂತೆ ಮಾಡಿದ್ರು. ಆರಂಭದಲ್ಲಿ ಸಿಧು-ಅಮರಿಂದರ್ ಸಿಂಗ್ ಬಾಳ ಚೆನ್ನಾಗೇ ಇದ್ರು. ಆದ್ರೆ ಬರ್ತಾ ಬರ್ತಾ ಸಂಬಂಧ ಹಳಸಿ ಸಿಧು ಸಿಎಂ ಅಮರಿಂದರ್ ಅವರ ದೊಡ್ಡ ಟೀಕಾಕಾರ ಆಗ್ಬಿಟ್ರು. ಸಚಿವ ಸ್ಥಾನಕ್ಕೆ ರಾಜನಾಮೆ ನೀಡಿ ಕ್ಯಾಪ್ಟನ್ ಸಂಪುಟದಿಂದ ಹೊರಬಂದಿದ್ರು. ಇದೀಗ ಪಂಜಾಬ್ ವಿಧಾನಸಭಾ ಚುನಾವಣೆ ಹತ್ತಿರ ಬಂದಿದೆ. ಈ ವೇಳೆ ಕ್ಯಾಪ್ಟನ್ – ಸಿಧು ಬಡಿದಾಡ್ತಿದಾರೆ. ಹೀಗಾಗಿ ಈ ಬೆಂಕಿ ನಂದಿಸೋಕೆ ಮತ್ತೆ ಪ್ರಶಾಂತ್ ಕಿಶೋರ್ ಮೊರೆ ಹೋಗಿದೆ ಕಾಂಗ್ರೆಸ್ ಹೈ ಕಮಾಂಡ್.

-masthmagaa.com

Contact Us for Advertisement

Leave a Reply