ಪುಟಿನ್‌- ಬೈಡೆನ್‌ ಮಾತುಕತೆ? ಗ್ರೀನ್‌ ಸಿಗ್ನಲ್‌ ನೀಡಿದ ಬೈಡೆನ್!

masthmagaa.com:

ಒಪೆಕ್‌+ ತೈಲ ಒಕ್ಕೂಟ ಇತ್ತೀಚೆಗೆ ರಷ್ಯಾ ಜೊತೆ ಸೇರಿ ತೈಲ ಉತ್ಪಾದನೆ ಕಡಿತಗೊಳಿಸೊ ನಿರ್ಧಾರ ಮಾಡಿತ್ತು. ಇದರ ಹಿನ್ನಲೆಯಲ್ಲಿ ಅಮೆರಿಕ ಪ್ರತಿಕ್ರಿಯಿಸಿದೆ. ಸೌದಿ ಅರೆಬಿಯಾ ಜೊತೆಗಿನ ಸಂಬಂಧಗಳನ್ನ ಮತ್ತೆ ಪರೀಶಿಲಿಸೋಕೆ ಅಂದ್ರೆ ಮಾತುಕತೆಯಿಂದ ಸಂಬಂಧಗಳನ್ನ ಸರಿಪಡಿಸೋಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಬಯಸ್ತಾರೆ ಅಂತ ವೈಟ್‌ಹೌಸ್‌ ಹೇಳಿದೆ. ಈ ಬಗ್ಗೆ ಬೈಡೆನ್‌ ಸ್ಪಷ್ಟಪಡಿಸಿದ್ದಾರೆ. ಅವ್ರು ಮತ್ತೊಮ್ಮೆ ಸೌದಿಗೆ ಭೇಟಿ ನೀಡೋಕೆ ಇಚ್ಚಿಸಿದ್ದಾರೆ ಅಂತ ಶ್ವೇತ ಭವನದ ನ್ಯಾಷನಲ್‌ ಸೆಕ್ಯುರಿಟಿ ಸ್ಪೋಕ್‌ ಪರ್ಸನ್ ಜಾನ್‌ ಕಿರ್ಬಿ ಹೇಳಿದ್ದಾರೆ. ಅಂದ್ಹಾಗೆ ನಿನ್ನೆ ಅಷ್ಟೇ ಅಮೆರಿಕ ಸಂಸದರೊಬ್ಬರು ಸೌದಿ ತನ್ನ ನಿರ್ಧಾರವನ್ನ ಮರು ಪರೀಶಿಲಿಸೋವರೆಗೂ ಅದರ ಜೊತೆಗೆ ಯಾವುದೇ ಸಹಕಾರಕ್ಕೆ ಅಮೆರಿಕ ಮುಂದಾಗಲ್ಲ ಅಂತ ಹೇಳಿದ್ರು. ಇನ್ನೊಂದ್‌ ಕಡೆ ಯುಕ್ರೇನ್‌ ಯುದ್ದವನ್ನ ಕೊನೆಗೊಳಿಸೋಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಜೊತೆ ಮಾತುಕತೆ ನಡೆಸೋಕೆ ಅಧ್ಯಕ್ಷ ಜೋ ಬೈಡೆನ್‌ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಇದೇ ವೇಳೆ ಪುಟಿನ್‌ರನ್ನ ಭೇಟಿ ಮಾಡೋಕೆ ನಂಗೆ ಯಾವುದೇ ಬೇರೆ ಇಂಟೆನ್ಶನ್‌ ಇಲ್ಲ ಅಂತಾನೂ ಬೈಡೆನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply